ADVERTISEMENT

ಮೂಲ ಅಸ್ಪೃಶ್ಯರಿಂದ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 16:23 IST
Last Updated 20 ಜೂನ್ 2020, 16:23 IST
ರಾಜ್ಯ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಜಾತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಹಾವೇರಿ ಜಿಲ್ಲಾ ಪಂಚಮ ಮೂಲ ಅಸ್ಪೃಶ್ಯ ಹೋರಾಟ ಸಮಿತಿಯ ಸದಸ್ಯರು ಶನಿವಾರ ಪತ್ರ ಚಳವಳಿ ನಡೆಸಿದರು 
ರಾಜ್ಯ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಜಾತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಹಾವೇರಿ ಜಿಲ್ಲಾ ಪಂಚಮ ಮೂಲ ಅಸ್ಪೃಶ್ಯ ಹೋರಾಟ ಸಮಿತಿಯ ಸದಸ್ಯರು ಶನಿವಾರ ಪತ್ರ ಚಳವಳಿ ನಡೆಸಿದರು    

ಹಾವೇರಿ: ರಾಜ್ಯ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯಜಾತಿಗೆ ಸೇರಿರುವ ಲಂಬಾಣಿ, ಬೋವಿ, ಕೊರಚ ಹಾಗೂ ಕೊರಮ ಜಾತಿಗಳನ್ನು ಕೈಬಿಟ್ಟು, ಪಂಚಮ ಮೂಲ ಅಸ್ಪೃಶ್ಯರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಮ ಮೂಲ ಅಸ್ಪೃಶ್ಯ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ನೇತೃತ್ವದಲ್ಲಿ ಸದಸ್ಯರು ಪತ್ರ ಚಳವಳಿ ಮಾಡಿದರು.

ಶನಿವಾರ ಮುಖ್ಯ ಅಂಚೆ ಕಚೇರಿಯ ಅಂಚೆ ಡಬ್ಬಿಯಲ್ಲಿ ಸಮಿತಿಯ ನೂರಾರು ಸದಸ್ಯರು ಮುಖ್ಯಮಂತ್ರಿಗೆ ಪತ್ರ ಹಾಕುವ ಮೂಲಕ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಸಾವಿರಾರು ವರ್ಷಗಳಿಂದ ಅಸ್ಪೃಶ್ಯರೆಂದು ಗುರುತಿಸಿದ ಜನಾಂಗಕ್ಕೆ ನ್ಯಾಯ ಒದಗಿಸುವುದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್‌ ಅವರು ಮೂಲ ಅಸ್ಪೃಶ್ಯರಿಗೆ ಮೀಸಲಾತಿ ನೀಡಿದ್ದರು. ಆದರೆ ರಾಜ್ಯದಲ್ಲಿ ಅಸ್ಪೃಶ್ಯರಲ್ಲದ ಕೆಲ ಜನಾಂಗವನ್ನು ಈ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಮೂಲಕ ಮೂಲ ಅಸ್ಪೃಶ್ಯರೆಂದು ಪರಿಗಣಿಸಲ್ಪಡುವ ಹೊಲೆಯ, ಮಾದಿಗ, ಸಮಗಾರ, ಮೋಚಿ ಮತ್ತು ಡೋರ ಜಾತಿ ಜನಾಂಗಕ್ಕೆ ಅನ್ಯಾಯವನ್ನು ಮಾಡಲಾಗಿದೆ. ಆದ್ದರಿಂದ ಈ ಜನಾಂಗವನ್ನು ಹೊರತುಪಡಿಸಿ ಉಳಿದ ಜಾತಿಗಳನ್ನು ಆ ಪಟ್ಟಿಯಿಂದ ತೆಗೆಯುವ ಮೂಲಕ ಮೂಲ ಅಸ್ಪೃಶ್ಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

ADVERTISEMENT

ಎಸ್.ಜಿ.ಹೊನ್ನಪ್ಪನವರ, ನಾಗರಾಜ ಮಾಳಗಿ, ಉಡಚಪ್ಪ ಮಾಳಗಿ ಸೇರಿದಂತೆ ಇತರರು ಮಾತನಾಡಿದರು.
ಮೂಲ ಅಸ್ಪೃಶ್ಯ ಜನಾಂಗದ ಮುಖಂಡರಾದ ಸುರೇಶ ಚಲವಾದಿ, ಹೊನ್ನೇಶ ತಗಡಿನಮನಿ, ಅಶೋಕ ಮರಿಯಣ್ಣನವರ, ನಿಂಬಣ್ಣ ಮರಿಯಮ್ಮನವರ, ಯಲ್ಲಪ್ಪ ಬೆಟಗೇರಿ, ಮಂಜಪ್ಪ ಮರಳ, ಸೋಮನಾಥ ಕಾಂಬಳೆ, ನಾಗರಾಜ ಮಾಳಗಿ, ಶಂಭು ಕಳಸದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.