ಹಾನಗಲ್: ಇಲ್ಲಿನ ಪೇಟೆ ಭಾಗದ ರಾಯರ ಮಠದಲ್ಲಿ ಗುರುವಾರ ರಾಘವೇಂದ್ರ ಸ್ವಾಮಿಗಳ ಆರಾಧನೆ ಉತ್ಸವದ ನಿಮಿತ್ತ ಭಕ್ತರ ಮಂತ್ರಘೋಷಗಳ ನಡುವೆ ರಥೋತ್ಸವ ನಡೆಯಿತು.
ಪೂರ್ವಾರಾಧನೆ ಮತ್ತು ಮಧ್ಯಾರಾಧನೆ ಬಳಿಕ ಕೊನೆಯ ದಿನದ ಉತ್ತರಾರಾಧನೆ ರಾಯರ ದಿನ ಗುರುವಾರ ನಡೆದಿರುವುದು ರಾಘವೇಂದ್ರ ಸ್ವಾಮಿಗಳ ಭಕ್ತರಲ್ಲಿ ಹರ್ಷ ಮೂಡಿಸಿತ್ತು.
ಕೊನೆಯ ದಿನದ ಆರಾಧನೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿದ್ದರು. ಅಲಂಕೃತಗೊಂಡ ಸ್ವಪ್ನ ಬೃಂದಾವನ ದರ್ಶನ ಪಡೆದು ರಾಯರ ನಾಮ ಜಪಿಸಿದರು.
ಗುರುವಾರ ಸ್ವಪ್ನ ಬೃಂದಾವನಕ್ಕೆ ವಿಶೇಷ ಪೂಜೆ, ವಿವಿಧ ಅಭಿಷೇಕಗಳ ಬಳಿಕ ಮಧ್ಯಾಹ್ನ ಮಠದಲ್ಲಿ ರಥೋತ್ಸವ ನಡೆಯಿತು. ವಿವಿಧ ಭಜನಾ ಮಂಡಳಿಗಳಿಂದ ಭಜನೆ, ನೃತ್ಯ ಸೇವೆ ನಡೆದವು.
ವೇದವ್ಯಾಸ ಆಚಾರ್ಯ ಲಿಂಗೇರಿ ಅವರು ಆರಾಧನೆ ಉತ್ಸವದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.