ADVERTISEMENT

ಹೆರಿಗೆ ಸಂದರ್ಭದಲ್ಲಿ ಶಿಶು ತಲೆಗೆ ತಾಗಿದ ಬ್ಲೇಡ್; ಹಾವೇರಿ ವೈದ್ಯೆಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 15:54 IST
Last Updated 27 ಡಿಸೆಂಬರ್ 2025, 15:54 IST
<div class="paragraphs"><p>ಶಿಶು (ಸಾಂದರ್ಭಿಕ ಚಿತ್ರ)</p></div>

ಶಿಶು (ಸಾಂದರ್ಭಿಕ ಚಿತ್ರ)

   

ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಸಂದರ್ಭದಲ್ಲಿ ಶಿಶುವಿನ ತಲೆಗೆ ಬ್ಲೇಡ್ ತಾಗಿ ಗಾಯವಾಗಿದ್ದ ಪ್ರಕರಣ ಸಂಬಂಧ, ವೈದ್ಯೆ ಡಾ. ಸ್ವಾತಿ ತಿಲಕ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಡಿ. 26ರಂದು ನಡೆದಿದ್ದ ಘಟನೆಯ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಹಾವೇರಿ: ಶಿಶುವಿನ ತಲೆಗೆ ತಾಗಿದ ಕತ್ತರಿ’ ಶೀರ್ಷಿಕೆಯಡಿ ಡಿ. 27ರಂದು ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಜಿಲ್ಲಾ ಶಸ್ತ್ರಚಿಕಿತ್ಸಕ ಪಿ.ಆರ್. ಹಾವನೂರು ಅವರು ನೋಟಿಸ್ ಜಾರಿ ಮಾಡಿದ್ದಾರೆ.

ADVERTISEMENT

‘ರಾಣೆಬೆನ್ನೂರು ಬೀಬಿಆಪ್ಸಾ ದಾರವಾರ (19) ಅವರ ಹೆರಿಗೆ ಸಂದರ್ಭದಲ್ಲಿ ಗರ್ಭಕೋಶದಲ್ಲಿ ನೀರಿನ ಅಂಶ ಕಡಿಮೆ ಇರುವ ಕಾರಣವನ್ನು ಪೋಷಕರಿಗೆ ತಿಳಿಸಿ, ಶಸ್ತ್ರಚಿಕಿತ್ಸೆ ಮಾಡಿದ್ದೀರಾ. ಹೆರಿಗೆ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗುವಿಗೆ ಬ್ಲೇಡ್ ತಗುಲಿ ಗಾಯವಾಗಿರುವುದಾಗಿ ಪೋಷಕರು ಆರೋಪಿಸುತ್ತಿದ್ದಾರೆ. ನೋಟಿಸ್ ತಲುಪಿದ 24 ಗಂಟೆಯೊಳಗೆ ಲಿಖಿತ ವಿವರಣೆ ನೀಡಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.