ADVERTISEMENT

ಬಿಜೆಪಿ ಮಹಿಳಾ ಮೋರ್ಚಾ: ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 13:38 IST
Last Updated 6 ಆಗಸ್ಟ್ 2020, 13:38 IST
ಹಾವೇರಿಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಮಹಿಳಾ ಮೋರ್ಚಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅವರಿಗೆ ಮಹಿಳೆಯರು ರಾಖಿ ಕಟ್ಟಿದರು 
ಹಾವೇರಿಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಮಹಿಳಾ ಮೋರ್ಚಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅವರಿಗೆ ಮಹಿಳೆಯರು ರಾಖಿ ಕಟ್ಟಿದರು    

ಹಾವೇರಿ: ನಗರದಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅಧ್ಯಕ್ಷತೆಯಲ್ಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಿದ್ದರಾಜ ಕಲಕೋಟಿ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಈ ಮಟ್ಟಿಗೆ ಶಕ್ತಿಶಾಲಿಯಾಗಲು ಮಹಿಳಾ ಮೋರ್ಚಾ ಕೂಡಾ ಪ್ರಮುಖ ಪಾತ್ರವಹಿಸಿದೆ. ಎಲ್ಲ ವರ್ಗದ ಮಹಿಳೆಯರನ್ನು ಎಲ್ಲ ಸ್ಥರಗಳಲ್ಲಿ ಪಕ್ಷದತ್ತ ಆಕರ್ಷಿಸಿ ಪಕ್ಷಕ್ಕೆ ಜೋಡಿಸುವ ಕೆಲಸವನ್ನು ನೂತನ ಪದಾಧಿಕಾರಿಗಳು ಮಾಡಬೇಕು ಎಂದು ಮನವಿ ಮಾಡಿದರು.

ಆಯ್ಕೆಯಾದವರ ವಿವರ:ಅಧ್ಯಕ್ಷರಾಗಿ ಸುಮಿತ್ರಾ ಬಿ.ಪಾಟೀಲ, ಉಪಾಧ್ಯಕ್ಷರಾಗಿ ಅಬಿದಾಬಿ ಇಸ್ಮಾಯಿಲ್‌ ಸಾಬ್‌ ನದಾಫ್ ಮತ್ತು
ಅನಸೂಯಾ ಅಜ್ಜಪ್ಪ ಯರವಿನತೆಲೆ,ಪ್ರಧಾನ ಕಾರ್ಯದರ್ಶಿಯಾಗಿ ಲಲಿತಾ ಬಸವರಾಜ ಗುಂಡೇನಹಳ್ಳಿ,ರೂಪಾ ರಾಜೇಂದ್ರ ಬಾಕಳೆ,ಕಾರ್ಯದರ್ಶಿಯಾಗಿ ಶಾಂತಾ ರಾ. ಪಾಟೀಲ,ರತ್ನಾ ಬನ್ನಿಕೊಪ್ಪ,ಭಾರತಿ ಪ್ರಭು ಕರ್ಜಗಿಯಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಕಾರ್ಯಕಾರಿಣಿ ಸದಸ್ಯರಾಗಿ ದೇವಿರಮ್ಮ ಗುಂಡೂರು,ಶಾರದಾ ಕು. ಮಕರವಳ್ಳಿ,ನಿರ್ಮಲಾ ಪಾಟೀಲ,ಲಲಿತಾ ಕುಬಸದ, ಶಂಕ್ರಮ್ಮ ಸೊರಟಿ, ಆಶಾ ಕೋರಿ, ಸುಧಾ ಚಿಂದಿ, ಪ್ರಜ್ವಲಾ ಗೋಣೆಮ್ಮವನರ, ವನಿತಾ ಎಚ್. ಗುತ್ತಲ್, ಸಾವಿತ್ರಾ ಪಾಟೀಲ,ಭಾಗ್ಯಶ್ರೀ ಪಾಟೀಲ, ಬಿಬಿಜೈನಂ ಮುನಿಯಾರ, ಹೇಮಾ ದ. ಕಾಮಣಿ, ಗೌರಮ್ಮ ಹಲಗಲಿ, ಎನ್.ವಿ. ಪದ್ಮಾ, ಅನಿತಾ ಹಬೀಬ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.