ADVERTISEMENT

ಅಬಕಾರಿ ಉಪಆಯುಕ್ತರ ಕಿರುಕುಳ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 13:06 IST
Last Updated 28 ಜನವರಿ 2020, 13:06 IST
ಹಾವೇರಿ ಅಬಕಾರಿ ಉಪ ಆಯುಕ್ತರ ಕಿರುಕುಳ ಖಂಡಿಸಿ ಸನ್ನದ್ದುದಾರರು ಮಂಗಳವಾರ ಜಿಲ್ಲೆಯ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಹಾವೇರಿ ಅಬಕಾರಿ ಉಪ ಆಯುಕ್ತರ ಕಿರುಕುಳ ಖಂಡಿಸಿ ಸನ್ನದ್ದುದಾರರು ಮಂಗಳವಾರ ಜಿಲ್ಲೆಯ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹಾವೇರಿ: ಅಬಕಾರಿ ಉಪ ಆಯುಕ್ತರ ಕಿರುಕುಳ ಖಂಡಿಸಿ ಸನ್ನದ್ದುದಾರರು ಮಂಗಳವಾರ ಜಿಲ್ಲೆಯ ಎಲ್ಲ ಐಎಂಎಲ್ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಸನ್ನದ್ದುದಾರರು, ಅಬಕಾರಿ ಉಪಆಯುಕ್ತ ನಾಗಶಯನ ವಿರುದ್ಧ ಧಿಕ್ಕಾರ ಕೂಗಿದರು. ಅವರನ್ನು ಕೆಲಸದಿಂದ ವಜಾ ಗೊಳಿಸಬೇಕು ಇಲ್ಲವೇ ಅಮಾನತು ಮಾಡಬೇಕು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಶಿಸ್ತುಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಅಬಕಾರಿ ಉಪ ಆಯುಕ್ತ ನಾಗಶಯನ ಮದ್ಯ ಮಾರಾಟ ಮಾಡುವ ಸನ್ನದ್ದುದಾರರಿಗೆ ವ್ಯಾಪಾರ ನಡೆಸಲು ಕಿರುಕುಳ ಕೊಡುತ್ತಿದ್ದಾರೆ. ಮೇಲಿಂದ ಮೇಲೆ ಸನ್ನದ್ದುದಾರರಿಗೆ ಲಂಚ ಕೇಳುವುದು, ಕಾನೂನಿನ ವಿರುದ್ಧವಾಗಿ ಕಾರ್ಯ ಮಾಡಲು ಒತ್ತಡ ಹಾಕುವುದು ಮಾಡುತ್ತಿದ್ದಾರೆ ಸನ್ನದ್ದುದಾರರು ಆರೋಪಿಸಿದರು.

ADVERTISEMENT

ಮದ್ಯ ಮಾರಾಟ ಪರವಾನಗಿ ನೀಡುವಾಗಲೇ ಬ್ಲ್ಯೂಪ್ರಿಂಟ್ ನೋಡಿ ಪರವಾನಗಿ ಕೊಟ್ಟಿರುತ್ತಾರೆ. ಆದರೆ, ಉಪ ಆಯುಕ್ತ ದಾಖಲೆಗಳು ಸರಿಯಿಲ್ಲ ಎಂದು ಹೇಳಿ, ಪ್ರಕರಣ ದಾಖಲಿಸಿ ಕಿರುಕುಳ ಕೊಡುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಮದ್ಯ ಪಡೆಯಲು ಒತ್ತಡ ಹಾಕುವುದು ಹಾಗೂ ಅನಗತ್ಯ ದಾಳಿ ಮಾಡುವ ಮೂಲಕ ಸನ್ನದ್ದುದಾರರಿಗೆ ಬೆದರಿಸಿ, ಪರೋಕ್ಷವಾಗಿ ಲಂಚದ ಹಣ ಹೆಚ್ಚಳಕ್ಕೆ ಅವಕಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.

ರಾಜ್ಯ ಮದ್ಯ ಮಾರಾಟಗಾರರ ಸಂಘದ (ಐಎಂಎಲ್) ಗುರುಸ್ವಾಮಿ ಮೈಸೂರು, ಜಿಲ್ಲಾಧ್ಯಕ್ಷ ಬಸವರಾಜ ಬೆಳವಡಿ, ಎಸ್.ಎಸ್. ಶೀಲವಂತ, ಎಂ. ನಾಗರಾಜ, ಪ್ರಶಾಂತ ಶೆಟ್ಟರ್ ಇನ್ನಿತರ ಪ್ರಮುಖರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.