ADVERTISEMENT

ಹಾವೇರಿ | ಹಸುಗೂಸು ಸಾವು: ಮಕ್ಕಳ ಆಯೋಗದಿಂದ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 23:41 IST
Last Updated 19 ನವೆಂಬರ್ 2025, 23:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಹಾವೇರಿ: ಇಲ್ಲಿನ ಸರ್ಕಾರಿ ಮಹಿಳಾ ಮತ್ತು‌ ಮಕ್ಕಳ ಆಸ್ಪತ್ರೆಯ ಶೌಚಾಲಯ ಬಳಿ ಗರ್ಭಿಣಿಗೆ ದಿಢೀರ್ ಹೆರಿಗೆಯಾಗಿ ನೆಲದ ಮೇಲೆ ಬಿದ್ದು ಶಿಶು ಮೃತಪಟ್ಟ ಘಟನೆ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ADVERTISEMENT

ಆಸ್ಪತ್ರೆಯಲ್ಲಿ ಮಂಗಳವಾರ (ನ.18) ನಡೆದಿದ್ದ ಘಟನೆ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ನೆಲಕ್ಕೆ ಬಿದ್ದು ಹಸುಗೂಸು ಸಾವು’ ವರದಿ ಪ್ರಕಟಗೊಂಡಿತ್ತು. ಇದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ, ‘ಘಟನೆ ಬಗ್ಗೆ ತನಿಖೆ ನಡೆಸಿ 3 ದಿನದೊಳಗೆ ವರದಿ ಸಲ್ಲಿಸಿ’ ಎಂದು ಹಾವೇರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.

ಸಾವಿಗೆ ಸರ್ಕಾರವೇ ಹೊಣೆ: ‘ಜಿಲ್ಲಾಸ್ಪತ್ರೆ ಕಾರಿಡಾರ್‌ನಲ್ಲಿ ಶಿಶು ಅಸುನೀಗಿರುವುದು ಹೃದಯವಿದ್ರಾವಕ ಘಟನೆ. ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿಗೆ ನಿದರ್ಶನ. ಈ ಸಾವಿಗೆ ಸರ್ಕಾರವೇ ಹೊಣೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.