ADVERTISEMENT

ಹಾವೇರಿ | ಹುತಾತ್ಮರ ತ್ಯಾಗ, ಬಲಿದಾನ ಸ್ಮರಣೆ ಅಗತ್ಯ: ನಾಗರಾಜ ಮೆಳ್ಳಾಗಟ್ಟಿ

ಪೊಲೀಸ್ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಕಮಾಂಡಂಟ್ ನಾಗರಾಜ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:20 IST
Last Updated 22 ಅಕ್ಟೋಬರ್ 2025, 6:20 IST
ಶಿಗ್ಗಾವಿ ತಾಲ್ಲೂಕಿನ ಗಂಗೆಬಾವಿ ಕೆ.ಎಸ್.ಆರ್.ಪಿ 10ನೇ ಪಡೆ ಆವರಣದಲ್ಲಿ ಮಂಗಳವಾರ ನಡೆದ ಪೊಲೀಸ್ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಕಮಾಂಡಂಟ್ ನಾಗರಾಜ ಮೆಳ್ಳಾಗಟ್ಟಿ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು
ಶಿಗ್ಗಾವಿ ತಾಲ್ಲೂಕಿನ ಗಂಗೆಬಾವಿ ಕೆ.ಎಸ್.ಆರ್.ಪಿ 10ನೇ ಪಡೆ ಆವರಣದಲ್ಲಿ ಮಂಗಳವಾರ ನಡೆದ ಪೊಲೀಸ್ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಕಮಾಂಡಂಟ್ ನಾಗರಾಜ ಮೆಳ್ಳಾಗಟ್ಟಿ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು   

ಶಿಗ್ಗಾವಿ: ‘ಜನರ ಮಾನ, ಪ್ರಾಣ, ದೇಶ ಸೇವೆ ಮಾಡುವ ಮೂಲಕ ಪ್ರಾಣತ್ಯಾಗ ಮಾಡಿರುವ ವೀರ ಯೋಧ ಪೊಲೀಸ ಅಧಿಕಾರಿಗಳ, ಸಿಬ್ಬಂದಿ ಸೇವೆ ಸ್ಮರಣೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಅವರ ದೇಶಾಭಿಮಾನ, ಧೈರ್ಯ, ಸಾಹಸ ಹಾಗೂ ಕಾಯಕ ನಿಷ್ಠೆ ಇತರ ಸಿಬ್ಬಂದಿಗೆ ಮಾದರಿಯಾಗಿದೆ’ ಎಂದು ಕಮಾಂಡಂಟ್ ನಾಗರಾಜ ಮೆಳ್ಳಾಗಟ್ಟಿ ಹೇಳಿದರು.

ತಾಲ್ಲೂಕಿನ ಗಂಗೆಬಾವಿ ಕೆ.ಎಸ್.ಆರ್.ಪಿ 10ನೇ ಪಡೆ ಆವರಣದಲ್ಲಿ ಮಂಗಳವಾರ ನಡೆದ ಪೊಲೀಸ್ ಹುತಾತ್ಮರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಕೆ.ಎಸ್.ಆರ್.ಪಿ ಪಡೆಯ ಪೊಲೀಸರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ. ಗಲಭೆ, ವ್ಯಾಜ್ಯ ಹಾಗೂ ಗಲಾಟೆಗಳನ್ನು ತಡೆಯುವ ಮೂಲಕ ಸಮಾಜದ ಸುವ್ಯವಸ್ಥೆಗೆ ಸಂರಕ್ಷಣಾ ಕಾರ್ಯದಲ್ಲಿ ನಿರತರಾಗುತ್ತಿದ್ದಾರೆ’ ಎಂದು ಹೇಳಿದರು

ನಿವೃತ್ತ ಕಮಾಂಡಂಟ್ ವೀರಣ್ಣ ಜಿರಾಳೆ ಮಾತನಾಡಿ, ಮಲಯ ಮಹಾದೇಶ್ವರ ಬೆಟ್ಟದಲ್ಲಿ ವೀರಪ್ಪನ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾದ ನಮ್ಮ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವೀರಮರಣ ಅಪ್ಪಿದರು. ಅದು ಕಣ್ಮುಂದೆ ನಡೆದಿರುವುದನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಆದರೂ ಪೊಲೀಸರು ಹಿಂಜರೆಯದೇ ಮುನ್ನುಗ್ಗಿ ಕಾರ್ಯಾಚರಣೆ ನಡೆಸಿದೆವು. ಅದರಲ್ಲಿ ನಾವು ಭಾಗವಹಿಸಿದ್ದು, ಹೆಮ್ಮೆ ಮೂಡಿಸುತ್ತದೆ ಎಂದು ಹೇಳಿದರು.

ADVERTISEMENT

‘ದೇಶ ಸೇವೆ ಎಂದರೆ ತಾಯಿ ಸೇವೆಯಷ್ಟೇ ಸಮಾನವಾಗಿದ್ದು, ಅಂತಹ ಕಾರ್ಯದಲ್ಲಿ ವೀರಮರಣ ಹೊಂದಿದರು ಸರಿ ದೇಶ ಸೇವೆ ಮಾಡಿರುವ ತೃಪ್ತಿ ಸಿಗುತ್ತಿದೆ. ಅಲ್ಲದೆ ದೇಶಕ್ಕೆ ಕೀರ್ತಿ, ಗೌರವ ತರಲು ಸಾಧ್ಯವಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಸೇವೆ ಅಮೋಘವಾಗಿದೆ. ಅದರಿಂದು ಬದುಕು ಸಾರ್ಥಕ ಎನ್ನಿಸುತ್ತಿದೆ ಎಂದರು.

ಸಹಾಯಕ ಕಮಾಂಡಂಟ್ ವಿಶ್ವನಾಥ ನಾಯಕ, ಸುಲೇಮಾನ ಹಂಚಿನಮನಿ, ಪೊಲೀಸ್ ಅಧಿಕಾರಿಗಳಾದ ಸಂತೋಷ ವಸ್ತ್ರದ, ಶ್ರೀಧರ ವಾಘ್ಮೋರೆ, ಸುರೇಶ ಡಂಬೇರ, ಹನುಮೇಶ.ಜಿ, ಪರೇಡ್ ಕಮಾಂಡರ್ ರಾಜೇಂದ್ರ ಶಿರಗುಪ್ಪ ಸೇರಿಂದಂತೆ ಕೆ.ಎಸ್.ಆರ್.ಪಿ 10ನೇ ಪಡೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.