ADVERTISEMENT

ಹಾವೇರಿ | ‘ಡಿಜಿಟಲ್ ಪುರಾವೆ ಆಧರಿಸಿ ನೋಟಿಸ್’

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 20:09 IST
Last Updated 21 ಜುಲೈ 2025, 20:09 IST
ಶಿವಾನಂದ ಪಾಟೀಲ
ಶಿವಾನಂದ ಪಾಟೀಲ   

ಹಾವೇರಿ: ‘ಫೋನ್‌ ಪೇ, ಗೂಗಲ್‌ ಪೇ ಮತ್ತು ಇತರೆ ಇ–ವ್ಯಾಲೆಟ್ ಮೂಲಕ ವ್ಯಾಪಾರಿಗಳು ನಡೆಸುವ ಹಣಕಾಸಿನ ವ್ಯವಹಾರಕ್ಕೆ ಡಿಜಿಟಲ್ ಪುರಾವೆ ಇರುತ್ತದೆ’ ಎಂದು ಜವಳಿ, ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಹೇಳಿದರು.

‘ವಾಣಿಜ್ಯ ತೆರಿಗೆ ಅಧಿಕಾರಿಗಳು, ಡಿಜಿಟಲ್ ಪುರಾವೆ ಇಟ್ಟುಕೊಂಡು ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದಾರೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ನೋಟಿಸ್ ಕೊಟ್ಟ ಮಾತ್ರಕ್ಕೆ ವ್ಯಾಪಾರಿಗಳು ಹೆದರಬೇಕಿಲ್ಲ. ಜಿಎಸ್‌ಟಿಯಿಂದ ವಿನಾಯಿತಿ ಪಡೆದ ವಸ್ತುಗಳಿದ್ದರೆ, ಕಚೇರಿಗೆ ತೆರಳಿ ಸ್ಪಷ್ಟನೆ ನೀಡಲು ಅವಕಾಶವಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.