ADVERTISEMENT

ಹಾವೇರಿ: ಧ್ವಜಾರೋಹಣ ನೆರವೇರಿಸಿದ‌ ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 6:00 IST
Last Updated 26 ಜನವರಿ 2025, 6:00 IST
   

ಹಾವೇರಿ: ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ರಾಷ್ಟ್ರ ಧ್ವಜಾರೋಹಣ ‌ನೆರವೇರಿಸಿದರು.

ನಂತರ, ಪೊಲೀಸ್ ಹಾಗೂ ಶಾಲಾ‌ ವಿದ್ಯಾರ್ಥಿಗಳಿಂದ ಗೌರವ ರಕ್ಷೆ ಸ್ವೀಕರಿಸಿದರು.

ಸಮಾರಂಭದಲ್ಲಿ ವಿವಿಧ ದಳಗಳಿಂದ ಪಥಸಂಚಲನ ನಡೆಯಿತು. ಅತ್ಯುತ್ತಮ ಪಥಸಂಚಲನ ನಡೆಸಿದ ದಳಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ADVERTISEMENT

ನಾಗೇಂದ್ರನಮಟ್ಟಿ ಪಿಎಂಶ್ರೀ ಉರ್ದು ಶಾಲೆ, ಮುನ್ಸಿಪಲ್ ಪ್ರೌಢಶಾಲೆ ವಿದ್ಯಾರ್ಥಿಗಳು, ದೇಶ ಪ್ರೇಮ ಗೀತೆಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಿವಾನಂದ ಪಾಟೀಲ, 'ಸಂವಿಧಾನದ ಮೂಲಕ ಸಮಾನತೆಯ ರಥವನ್ನು ಇಲ್ಲಿಯವರೆಗೂ ಮುಂದಕ್ಕೆ ಎಳೆದುಕೊಂಡು ಬಂದಿದ್ದೇವೆ. ಇನ್ನು‌ ಮುಂದೆಯೂ ಮುಂದಕ್ಕೆ ಎಳೆದುಕೊಂಡು ಹೋಗಬೇಕು. ಹಿಂದಕ್ಕೆ ತಳ್ಳುವ‌ ಕೆಲಸ ಮಾಡಬಾರದು' ಎಂದರು.

'ಸಂವಿಧಾನದ ಶ್ರೇಷ್ಠತೆ, ಆಶಯಗಳನ್ನು ಪಾಲಿಸುವ ಹೊಣೆಗಾರಿಕೆ ನಮ್ಮದು. ಏಕತೆ, ಭ್ರಾತೃತ್ವ, ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವೆಲ್ಲರೂ ಸಂಕಲ್ಪ ಮಾಡೋಣ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.