ಸಾಂಕೇತಿಕ ಚಿತ್ರ
ಹಾವೇರಿ: ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ಜಿಲ್ಲಾ ಪೊಲೀಸರು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಒಂದೇ ದಿನದಲ್ಲಿ 132 ಪ್ರಕರಣ ದಾಖಲಿಸಿಕೊಂಡು ₹ 80,900 ದಂಡ ಸಂಗ್ರಹಿಸಿದ್ದಾರೆ.
‘ಜಿಲ್ಲೆಯ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. 132 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ ’ಪ್ರಜಾವಾಣಿ’ಗೆ ತಿಳಿಸಿದರು.
ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದ ಸವಾರ ಹಾಗೂ ಹಿಂಬದಿ ಸವಾರರ ವಿರುದ್ಧ ಪೊಲೀಸರು 66 ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಪ್ಪಿತಸ್ಥರಿಂದ ₹ 33,000 ದಂಡ ಸಂಗ್ರಹಿಸಿದ್ದಾರೆ.
ಅತೀ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದ 33 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ₹ 33,000 ದಂಡ ವಿಧಿಸಿದ್ದಾರೆ. ಮೋಟಾರು ವಾಹನಗಳ ಕಾಯ್ದೆಯಡಿ 9 ಪ್ರಕರಣ ದಾಖಲಿಸಿಕೊಂಡು, ₹ 2,400 ದಂಡ ಪಡೆದಿದ್ದಾರೆ.
ಪಥ ಶಿಸ್ತು ಪಾಲಿಸದವರ ವಿರುದ್ಧ 20 ಪ್ರಕರಣ ದಾಖಲಿಸಿಕೊಂಡು, ₹ 10,500 ದಂಡ ವಸೂಲಿ ಮಾಡಿದ್ದಾರೆ. ಅತೀ ಪ್ರಖರ ದೀಪಗಳನ್ನು ಅಳವಡಿಸಿಕೊಂಡಿದ್ದವರ ವಿರುದ್ಧ 4 ಪ್ರಕರಣ ದಾಖಲಿಸಿ, ₹ 2,000 ವಸೂಲಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.