ADVERTISEMENT

ಹಿರೇಕೆರೂರು | ಅಪಘಾತ: ಖಾಸಗಿ ಶಾಲೆಯ ಶಿಕ್ಷಕಿ ಸಾವು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 2:55 IST
Last Updated 5 ನವೆಂಬರ್ 2025, 2:55 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಹಿರೇಕೆರೂರು: ತಾಲ್ಲೂಕಿನ ಹಂಸಬಾವಿ– ಚಿಕ್ಕೇರೂರು ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಖಾಸಗಿ ಶಾಲೆಯ ಶಿಕ್ಷಕಿ ಅರ್ಪಿತಾ ಚಂದ್ರಪ್ಪ ಸನ್ನೇರ (28) ಎಂಬುವವರು ಮೃತಪಟ್ಟಿದ್ದಾರೆ.

ADVERTISEMENT

‘ನ.1ರಂದು ಈ ಅಪಘಾತ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಹಂಸಬಾವಿ ಠಾಣೆ ಪೊಲೀಸರು ತಿಳಿಸಿದರು.

‘ಅರ್ಪಿತಾ ಅವರು ರೋಹಿತ್‌ ಎಂಬುವವರ ಜೊತೆ ಬೈಕ್‌ನಲ್ಲಿ ಹೊರಟಿದ್ದರು. ಹಿಂಬದಿಯಲ್ಲಿ ಅರ್ಪಿತಾ ಕುಳಿತಿದ್ದರು. ಹಿರೇಕೊಣತಿ ಗ್ರಾಮದ ಬಳಿ ಬೈಕ್ ಸವಾರ ರೋಹಿತ್, ಎದುರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಿಂದಿಕ್ಕಲು ಹೋಗಿದ್ದರು. ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದ. ಇದೇ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೈಕ್, ರಸ್ತೆ ಬದಿಯ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಬೈಕ್‌ನಿಂದ ಬಿದ್ದ ಅರ್ಪಿತಾ ಅವರ ತಲೆ ಹಾಗೂ ಕಣ್ಣಿಗೆ ತೀವ್ರ ಗಾಯವಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ’ ಎಂದು ಹೇಳಿದರು.