ADVERTISEMENT

ಹಿರೇಕೆರೂರ ಪಟ್ಟಣಕ್ಕೆ ಬಂದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 2:35 IST
Last Updated 24 ಡಿಸೆಂಬರ್ 2025, 2:35 IST
ಹಿರೇಕೆರೂರ ಪಟ್ಟಣದಲ್ಲಿ ಕಾಡಾನೆ ಪತ್ತೆಗೆ ಬಾಳಂಬೀಡ ಸಮೀಪ ಬೀಡು ಬಿಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿ
ಹಿರೇಕೆರೂರ ಪಟ್ಟಣದಲ್ಲಿ ಕಾಡಾನೆ ಪತ್ತೆಗೆ ಬಾಳಂಬೀಡ ಸಮೀಪ ಬೀಡು ಬಿಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿ   

ಹಿರೇಕೆರೂರ: ಕಳೆದ ಮೂರ‍್ನಾಲ್ಕು ದಿನಗಳಿಂದ ಜಿಲ್ಲೆಯ ಬ್ಯಾಡಗಿ, ರಾಣಿಬೆನ್ನೂರು ತಾಲ್ಲೂಕಿನಲ್ಲಿ ಕಂಡು ಬಂದಿದ್ದ ಕಾಡಾನೆ ಬುಧವಾರ ಬೆಳಗಿನ ಜಾವ ಹಿರೇಕೆರೂರ ಪಟ್ಟಣದ ಶಾಸಕರ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಎದುರು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ.

ಮಂಗಳವಾರ ಬೆಳಗಿನ ಜಾವದ ಹೊತ್ತಿಗೆ ಹಿರೇಕೆರೂರ ಪಟ್ಟಣದ ಜನವಸತಿ ಪ್ರದೇಶದಲ್ಲಿರುವ ಶಾಸಕರ ಮಾದರಿ ಕನ್ನಡ ಶಾಲೆಯ ಗೇಟ್ ತೆಗೆದು ಒಳ ಹೋಗಿ ಹೊರ ಬಂದು ದುರ್ಗಾದೇವಿ ಕೆರೆ ಏರಿಯ ಮೂಲಕ ಹಾಯ್ದು ಮುಂದಕ್ಕೆ ಹೋಗಿದೆ.

ಕಾಡಾನೆ ಓಡಾಡಿದ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ADVERTISEMENT

ಕಾಡಾನೆಯಿಂದ ಬೆಳೆ ಅಥವಾ ಇನ್ನಾವುದೇ ರೀತಿಯ ಹಾನಿಯಾಗಿಲ್ಲ. ಪಟ್ಟಣದಿಂದ ಶಿರಾಳಕೊಪ್ಪ ಭಾಗದಲ್ಲಿ ಅಂದರೆ 21 ಕಿ.ಮೀ ದೂರಕ್ಕೆ ಹೋಗಿದೆ ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮೂಡಬಾಗಿಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.