ಸಾವು
ಪ್ರಾತಿನಿಧಿಕ ಚಿತ್ರ
ನರೇಗಲ್: ಪಟ್ಟಣದ ಹೊಸಪೇಟೆ ಓಣಿಯ ಮಹಿಳೆಯೊಬ್ಬರು ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೇಮಾವತಿ ಪ್ರಕಾಶ ಗೆದಗೇರಿ (34) ಆತ್ಮಹತ್ಯೆ ಮಾಡಿಕೊಂಡವರು. ಮುಖದ ಮೇಲಿನ ಕಲೆಗಳಿಂದ ಜಿಗುಪ್ಸೆ ಹೊಂದಿ ಅಡುಗೆ ಮನೆಯ ಎದುರಿನ ಕೋಣೆಯಲ್ಲಿ ಕಬ್ಬಿಣದ ವಂಕಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತಿ ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.