ADVERTISEMENT

ವಿನಯವೇ ಮನುಷ್ಯನ ಆತ್ಮ ಶಕ್ತಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 11:04 IST
Last Updated 29 ಡಿಸೆಂಬರ್ 2019, 11:04 IST
ನಿಜಗುಣ ಶಿವಯೋಗಿ ಸ್ವಾಮೀಜಿ, ವಿರಕ್ತಮಠ ಹತ್ತಿಮತ್ತೂರ ತಾ: ಸವಣೂರ ಜಿ: ಹಾವೇರಿ
ನಿಜಗುಣ ಶಿವಯೋಗಿ ಸ್ವಾಮೀಜಿ, ವಿರಕ್ತಮಠ ಹತ್ತಿಮತ್ತೂರ ತಾ: ಸವಣೂರ ಜಿ: ಹಾವೇರಿ   

ದೌರ್ಬಲ್ಯವು ಪಾಪದ ಮೂಲ. ಅದು ಆತ್ಮ ಶಕ್ತಿಯಸಂಕೋಚ ರೂಪ. ಅದು ಕುಂದಿದಷ್ಟು ಆತ್ಮ ದೌರ್ಬಲ್ಯ ಹೆಚ್ಚುತ್ತದೆ. ಸಾಮಾನ್ಯ ಜನರ ಸ್ತುತಿ ನಿಂದನೆಗಳಿಗೆ ಮರುಳಾಗುವವರಂತೂ ಹೆಚ್ಚಿನ ದೌರ್ಬಲ್ಯವನ್ನು ಪಡೆದಿರುವವರಿಗೆತಮ್ಮ ಆತ್ಮ ನಿರೀಕ್ಷೆಯಕಲ್ಪನೆಯು ಇರುವುದಿಲ್ಲ.

ಯಾರಿಗಿಂತ ನಾನೇನು ಕಡಿಮೆಯೆ? ಇಷ್ಟು ಸಂಪತ್ತು, ಇಷ್ಟು ಅಧಿಕಾರ ಪಡೆದವರು ಯಾರಿದ್ದಾರೆ? ಎಂಬ ಗರಿಮೆಯ ಕಿರಿಟವನ್ನು ತಲೆಗೆ ಸುತ್ತಿಕೊಂಡು ಯಾವಾಗಲು ಲೌಕಿಕ ಜನರ ಸ್ತುತಿಗಳಿಗೆ ಹಾರೈಸಿಕೊಂಡು ಕೂತಿರುತ್ತಾರೆ.

ಇಡಿ ವಿಶ್ವದ ದೃಷ್ಟಿಯಲ್ಲಿ ನಾವಿರುವ ಭೂಗೋಳವೂ ಕೂಡ ಒಂದು ಪರಮಾಣುವಿನಷ್ಟಿದೆ. ಅದರಲ್ಲಿ ನಾವು ಪಡೆದುಕೊಂಡಿದೆಷ್ಟು? ಎಂಬುದನ್ನು ಪರಾಮರ್ಶಿಸಿ ನೋಡಿದರೆ ನಮ್ಮಂತ ಮೂರ್ಖರು ಯಾರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ನಿಜವಾದ ತಿಳುವಳಿಕೆಯುಳ್ಳವನು ತನ್ನ ವಿವೇಕದ ಬೆಳಕಿನಲ್ಲಿ ಬಾಳಲು ತೊಡಗಿದಾಗ ಅವನು ಎಂದೂ ಅಹಂಕಾರಕ್ಕೆ ಈಡಾಗನು.

ADVERTISEMENT

ಮನುಷ್ಯ ವಿನಯ ಸೌಜನ್ಯದ ಆಗರವನ್ನು ತನ್ನಲ್ಲಿ ಇಟ್ಟುಕೊಂಡಷ್ಟುಆತ್ಮ ತೃಪ್ತಿ ಎನಿಸುವುದು. ತನ್ನ ಅಜ್ಞಾನವನ್ನು ಯಾರು ತಿಳಿಯುತ್ತಾರೆಯೋ ಅವನೇ ಜ್ಞಾನಿ,ಸ್ವಜ್ಞಾನ ಜ್ಞಾನಿನೋ ವಿರತಃ ತನ್ನ ಅಜ್ಞಾನವನ್ನು ತಿಳಿಯದ ವ್ಯಕ್ತಿಗಳು ತೀರ ವಿರಳ. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ನಿರಹಂಕಾರ ಭಾವವನ್ನು ವ್ಯಕ್ತ ಮಾಡಿದ್ದು ಬಸವಣ್ಣನವರ ಸುಜ್ಞಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.