ADVERTISEMENT

ಹಾವೇರಿ: ಅಕ್ರಮ ಮರಳು ಗಣಿಗಾರಿಕೆ, ತೆಪ್ಪಗಳ ನಾಶ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 16:44 IST
Last Updated 13 ನವೆಂಬರ್ 2020, 16:44 IST
ಜೆ.ಸಿ.ಬಿ. ಯಂತ್ರದಿಂದ ಅಕ್ರಮ ಮರಳು ಗಣಿಗಾರಿಕೆಗೆ ಬಳಸಿದ ತೆಪ್ಪಗಳನ್ನು ನಾಶ ಮಾಡಲಾಯಿತು 
ಜೆ.ಸಿ.ಬಿ. ಯಂತ್ರದಿಂದ ಅಕ್ರಮ ಮರಳು ಗಣಿಗಾರಿಕೆಗೆ ಬಳಸಿದ ತೆಪ್ಪಗಳನ್ನು ನಾಶ ಮಾಡಲಾಯಿತು    

ಹಾವೇರಿ: ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಮೇಲೆ ಅನಿರೀಕ್ಷಿತ ದಾಳಿ ಮಾಡಿ ಗಣಿಗಾರಿಕೆಗೆ ಬಳಸಿದ ತೆಪ್ಪಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಹಾವೇರಿ ತಾಲ್ಲೂಕಿನ ತುಂಗಭದ್ರಾ ನದಿ ಪತ್ರದಲ್ಲಿ ಅಕ್ರಮ ಗಣಿಗಾರಿಕೆ ಕುರಿತಂತೆ ಮಾಹಿತಿ ಪಡೆದ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಗುರುವಾರ ತಡರಾತ್ರಿ ದಾಳಿ ನಡೆಸಿ ಅನಧಿಕೃತವಾಗಿ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ನಾಲ್ಕು ಕಬ್ಬಿಣದ ತೆಪ್ಪಗಳನ್ನು ವಶಪಡಿಸಿಕೊಂಡು ಜೆ.ಸಿ.ಬಿ ಸಹಾಯದಿಂದ ನಾಶಪಡಿಸಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಶ್ರೀನಿವಾಸ ಕೆ., ಚೆಕ್‍ಪೋಸ್ಟ್ ಸಿಬ್ಬಂದಿ ನಾಗರಾಜ್ ವಿ.ಎಮ್. ಹುಲ್ಮನಿ, ಗುತ್ತಲ ಪೊಲೀಸ್ ಠಾಣೆಯ ಕರಿಯಪ್ಪ ಬೆಂಚಿಹಳ್ಳಿ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಡಾ.ಕೆ.ಎನ್.ಪುಷ್ಪಾವತಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.