ADVERTISEMENT

ಬಾಹ್ಯಕ್ಕಿಂತ ಆಂತರಿಕ ಭಕ್ತಿ ಮುಖ್ಯ: ಬೋಧಲೆ ಮಹಾರಾಜರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 3:25 IST
Last Updated 18 ಜನವರಿ 2026, 3:25 IST
ಶಿಗ್ಗಾವಿ ಪಟ್ಟಣದ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಗುರುವಾರ ದಿಂಡಿ ಉತ್ಸವ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಪಂಡರಪುರದ ಪ್ರಭಾಕರ ಬುವಾ ಭಜರಂಗ ಬುವಾ ಬೋಧಲೆ ಮಹಾರಾಜರು ಮಾತನಾಡಿದರು
ಶಿಗ್ಗಾವಿ ಪಟ್ಟಣದ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಗುರುವಾರ ದಿಂಡಿ ಉತ್ಸವ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಪಂಡರಪುರದ ಪ್ರಭಾಕರ ಬುವಾ ಭಜರಂಗ ಬುವಾ ಬೋಧಲೆ ಮಹಾರಾಜರು ಮಾತನಾಡಿದರು   

ಶಿಗ್ಗಾವಿ: ಬಾಹ್ಯ ಭಕ್ತಿ ತೋರದೆ ಆಂತರಿಕ ಭಕ್ತಿ ಮಾರ್ಗ ಅನುಸರಿಸುವುದು ಮುಖ್ಯವಾಗಿದೆ. ಅದರಿಂದ ಮನುಷ್ಯ ಮಾನವನಾಗಿ ಮಹಾದೇವನಾಗಲು ಸಾಧ್ಯವಿದೆ. ಅಂತಹ ಚಿಂತನೆಗಳು ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದು ಪಂಡರಪುರದ ಪ್ರಭಾಕರ ಬುವಾ ಭಜರಂಗ ಬುವಾ ಬೋಧಲೆ ಮಹಾರಾಜರು ಹೇಳಿದರು.

ಪಟ್ಟಣದ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಗುರುವಾರ ವಿಠ್ಠಲ ರುಕುಮಾಯಿ ಸೇವಾ ಸಮಿತಿ, ನಾಮದೇವ ಸಿಂಪಿ ಸಮಾಜ, ವಿಠ್ಠಲ-ರುಕುಮಾಯಿ ಮಹಿಳಾ ಮಂಡಳಿ ವತಿಯಿಂದ ಸಂತ ಶಿರೋಮಣಿ ನಿವೃತ್ತನಾಠ ಮಹಾರಾಜರ ಪುಣ್ಯತಿಥಿ ಅಂಗವಾಗಿ 58ನೇ ವಾಷರ್ಿಕ ದಿಂಡಿ ಉತ್ಸವ ಅಂಗವಾಗಿ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

’ಜನತೆಗೆ ತೋರುವ ಕ್ರಿಯೆ ಬೇರೆ ಮಾಡುವ ಕಾಯಕವೇ ಬೇರೆ. ಒಳ ಮತ್ತು ಹೊರ ಭಾವನೆಗಳು ಉತ್ತಮವಾಗಿರಬೇಕು. ದಿನಕ್ಕೊಂದು ದೇವರ ಹೆಸರಿನಲ್ಲಿ ಪೂಜಾ ಕೈಂಕರ್ಯ ಮಾಡುವವರು ಆಂತರಿಕ ಭಕ್ತಯಿಂದ ನಡೆಯಬೇಕು. ಪರಸ್ಪರ ಪ್ರೀತಿ, ವಿಶ್ವಾಸ ಜನರ ಮನಸ್ಸನ್ನು ಗಟ್ಟಿಗೊಳಿಸುತ್ತಿದೆ. ಗಂಧ ಹಚ್ಚಿಸಿದರೆ ಭಕ್ತನಾಗಲು ಸಾಧ್ಯವಿಲ್ಲ. ಪಾಂಡುರಂಗನ ಭಕ್ತನಾಗಿರಬೇಕು’ ಎಂದರು.

ADVERTISEMENT

ಹುಬ್ಬಳ್ಳಿ ಭರಪ್ಪ ವಡೇಕರ, ಬಂಕಾಪುರದ ಬಾನುದಾಸ ಸರ್ವದೆ, ಶಿರಕೋಳದ ರಾ,ಕೃಷ್ಣಪ್ಪ ಹಂಬದ, ವಿಠ್ಠಲ ರುಕುಮಾಯಿ ಸೇವಾ ಸಮಿತಿ ಅಧ್ಯಕ್ಷ ಕೇದಾರೆಪ್ಪ ಬಗಾಡೆ, ಗೌರವಾಧ್ಯಕ್ಷ ಸುರೇಶ ಮುಳೆ, ಕೃಷ್ಣಾ ಮುಳೆ, ಏಕನಾಥ ಮಾಳವದೆ, ನಾರಾಯಣ ಬಗಾಡೆ, ವಿನೋಬಾ ಮಾಳವದೆ, ಪರಶೂರಾಮ ಮಾಳವದೆ, ವಿನಾಯಕ ಗಂಜೀಗಟ್ಟಿ, ಪ್ರಕಾಶ ಔಂದಕರ, ಸುಧೀರ ಮಾಳವದೆ, ದಾಮೋಧರ ಮಾಳವದೆ, ಪ್ರಕಾಶ ಮಿರಜಕರ ಸೇರಿದಂತೆ ವಿಠ್ಠಲ ರುಕುಮಾಯಿ ಸೇವಾ ಸಮಿತಿ, ನಾಮದೇವ ಸಿಂಪಿ ಸಮಾಜ, ವಿಠ್ಠಲ-ರುಕುಮಾಯಿ ಮಹಿಳಾ ಮಂಡಳಿ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.