
ಪ್ರಜಾವಾಣಿ ವಾರ್ತೆಪ್ರಾಧಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ರಾಣೆಬೆನ್ನೂರು: ತಾಲ್ಲೂಕಿನ ಕುಮಾರಪಟ್ಟಣ ವ್ಯಾಪ್ತಿಯಲ್ಲಿ ಮಹಿಳೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ, ಕಿರುಕುಳ ನೀಡಿದ ಅಶೋಕ ಪುಟ್ಟಪ್ಪ ಮಡಿವಾಳರ, ಪುಷ್ಪಾ ಕೋಂ ಅಶೋಕ ಮಡಿವಾಳರ ಅವರಿಗೆ ತಲಾ ಒಂದು ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು ಇಬ್ಬರಿಗೂ ₹ 15000 ದಂಡ ವಿಧಿಸಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿ ಆದೇಶಿಸಿದೆ.
ಈ ಬಗ್ಗೆ ಕುಮಾರಪಟ್ಟಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಸಿಪಿಐ ಕೆ.ಟಿ.ಅಣ್ಣಯ್ಯ ಅವರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಆರೋಪ ಸಾಬೀತಾಗಿದ್ದಕ್ಕೆ ನ್ಯಾಯಾಧೀಶರಾದ ಮೇಘಶ್ರೀ ಅವರು ವಿಚಾರಣೆ ನಡೆಸಿ ಡಿ.16 ರಂದು ಮೇಲಿನಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕಿ ಕವಿತ ಎಸ್.ಜಿ ಅವರು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.