ADVERTISEMENT

ಬಸ್‌ ಸೀಟು ಹಿಡಿಯುವಾಗ ಆಭರಣ ಕಳವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 3:20 IST
Last Updated 10 ಅಕ್ಟೋಬರ್ 2025, 3:20 IST
<div class="paragraphs"><p>ಆಭರಣ </p></div>

ಆಭರಣ

   

ಹಾವೇರಿ: ತಾಲ್ಲೂಕಿನ ಹೊಸರಿತ್ತಿ ನಿಲ್ದಾಣದಲ್ಲಿ ಬಸ್‌ನ ಸೀಟು ಹಿಡಿಯುವ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಚಿನ್ನಾಭರಣ ಕಳವು ಮಾಡಲಾಗಿದ್ದು, ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸವಣೂರು ತಾಲ್ಲೂಕಿನ ಹತ್ತಿಮತ್ತೂರಿನ ನಿವಾಸಿ ಜಯಮ್ಮ ಅವರ ದೂರು  ಆಧರಿಸಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ದೂರುದಾರ ಮಹಿಳೆಯು ತಮ್ಮ ಮಗಳ ಜೊತೆ ರಾಣೆಬೆನ್ನೂರಿಗೆ ಹೋಗಿದ್ದರು. ಅಲ್ಲಿಂದ ಅಕ್ಟೋಬರ್ 3ರಂದು ಬಸ್‌ನಲ್ಲಿ ಹೊಸರಿತ್ತಿ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿ ಹೊಸರಿತ್ತಿ– ಸವಣೂರು ಬಸ್‌ಗಾಗಿ ಕಾಯುತ್ತಿದ್ದರು’ ಎಂದರು.

‘ನಿಲ್ದಾಣಕ್ಕೆ ಬಸ್‌ ಬಂದಾಗ, ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಬಸ್ಸಿನಲ್ಲಿ ಸೀಟು ಹಿಡಿಯಲು ಮುಂದಾದಾಗ, ಬ್ಯಾಗ್‌ ಅನ್ನು ಬಸ್ಸಿನಲ್ಲಿದ್ದ ಅಪರಿಚಿತ ವ್ಯಕ್ತಿಗೆ ನೀಡಿದ್ದರು. ನಂತರ, ಬಸ್‌ ಹತ್ತಿದಾಗ ಬ್ಯಾಗ್ ಇರಲಿಲ್ಲ. ಅಪರಿಚಿತ ವ್ಯಕ್ತಿ ಸಹ ಪರಾರಿಯಾಗಿದ್ದಾನೆ. ಬ್ಯಾಗ್‌ನಲ್ಲಿ ₹1.10 ಲಕ್ಷ ಮೌಲ್ಯದ ಚಿನ್ನಾಭರಣವಿತ್ತು ಎಂಬುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.