ADVERTISEMENT

ಕರೋಕೆ ಸ್ಪರ್ಧೆ: ರಮ್ಯಾರಾಣಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 12:44 IST
Last Updated 2 ಜೂನ್ 2023, 12:44 IST
ರಾಣೆಬೆನ್ನೂರಿನ ಸಿದ್ದೇಶ್ವರ ನಗರದ ಕಾಕಿ ಜನಸೇವಾ ಸಂಸ್ಥೆಯ ಸಭಾಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ಕರೋಕೆ ಚಲನಚಿತ್ರ ಗೀತೆಗಳ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತರಾದ ರಮ್ಯಾರಾಣಿ, ಮುತ್ತುರಾಜ್‌, ಸುನೀಲ ಅವರನ್ನು ಸನ್ಮಾನಿಸಲಾಯಿತು
ರಾಣೆಬೆನ್ನೂರಿನ ಸಿದ್ದೇಶ್ವರ ನಗರದ ಕಾಕಿ ಜನಸೇವಾ ಸಂಸ್ಥೆಯ ಸಭಾಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ಕರೋಕೆ ಚಲನಚಿತ್ರ ಗೀತೆಗಳ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತರಾದ ರಮ್ಯಾರಾಣಿ, ಮುತ್ತುರಾಜ್‌, ಸುನೀಲ ಅವರನ್ನು ಸನ್ಮಾನಿಸಲಾಯಿತು   

ರಾಣೆಬೆನ್ನೂರು: ಸ್ಥಳೀಯ ಯುವ ಕಲಾವಿದರು ಹಾಗೂ ವಿವಿಧ ಕ್ಷೇತ್ರದಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಕಲಾಪೋಷಕ ಕಾಕಿ ಜನಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು.

ಇಲ್ಲಿನ ಸಿದ್ದೇಶ್ವರ ನಗರದ ಕಾಕಿ ಜನಸೇವಾ ಸಂಸ್ಥೆಯ ಗಣೇಶೋತ್ಸವ ಮಹಾಮಂಟಪದಲ್ಲಿ ಕುರುಹಿನಶೆಟ್ಟಿ ಸೇವಾ ಸಮಾಜ,  ಸೇವಾ ಸಂಘ, ಜೆಸಿಐ, ಜೆಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ಕಾಕಿ ಸೌಹಾರ್ದ ಸಹಕಾರಿ ನಿಯಮಿತದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕರೋಕೆ ಚಲನಚಿತ್ರ ಗೀತೆಗಳ ಸ್ಪರ್ಧೆಯಲ್ಲಿ ಮಾತನಾಡಿದರು.

50ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ರಮ್ಯಾರಾಣಿ ಆರ್. ಎಂ. ಅವರು ಪ್ರಥಮ , ಮುತ್ತುರಾಜ್ ಸಾವಕ್ಕನವರ– ದ್ವಿತೀಯ ಹಾಗೂ ಸುನಿಲ್ ಎಲ್. ಜೆ ತೃತೀಯ ಸ್ಥಾನ ಪಡೆದರು. ಖಂಡೆಪ್ಪ ಪೂಜಾರ ಸಮಾಧಾನಕರ ಬಹುಮಾನ ಪಡೆದರು. ವಿಜೇತರಿಗೆ ನಗದು ಬಹುಮಾನ, ಆಕರ್ಷಕ ಪಾರಿತೋಷಕ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ADVERTISEMENT

ಜಾನಪದ ಹಾಗೂ ಕರೋಕೆ ಚಲನಚಿತ್ರ ಗಾಯಕರಾದ ಡಾ. ಕೆ.ಸಿ.ನಾಗರಜ್ಜಿ, ಪ್ರಕಾಶ ಗಚ್ಚಿನಮಠ, ಕೆ.ಎಸ್.ನಾಗರಾಜ, ಎ. ಎ.ಕಿಲ್ಲೇದಾರ ತೀರ್ಪುಗಾರರಾಗಿದ್ದರು.

ಹನುಮಂತಪ್ಪ ಕಾಕಿ, ಹನುಮಂತಪ್ಪ ಅಮಾಸಿ, ಶಿವಾನಂದ ಸಾಲಗೇರಿ, ಡಾ. ಶಿವಾನಂದ ಹಿತ್ತಲಮನಿ, ಪ್ರೊ.ಅರುಣಚಂದನ, ದೊಡ್ಡ ಹನುಮಂತಪ್ಪ, ವಿಜಯಲಕ್ಷ್ಮಿ, ವೆಂಕಟೇಶ, ಲಕ್ಷ್ಮಿ ಕಾಕಿ, ರೂಪಾ ಕಾಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.