ADVERTISEMENT

‘ಸಹಕಾರಿ ಸಂಘಗಳಿಗೆ ಜನರೇ ಆಧಾರಸ್ತಂಭ’: ರಂಭಾಪುರಿ ಸ್ವಾಮೀಜಿ

ನವೀಕೃತ ಒಳಾಂಗಣ, ಮೊದಲ ಮಹಡಿ ಕಟ್ಟದ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 4:07 IST
Last Updated 14 ಸೆಪ್ಟೆಂಬರ್ 2025, 4:07 IST
<div class="paragraphs"><p>ಶಿಗ್ಗಾವಿ ಅರ್ಬನ್ ಕೋ-ಆಪ್ ಬ್ಯಾಂಕಿನ ಬ್ಯಾಂಕ್ ರಜತ ಮಹೋತ್ಸವ, ನವೀಕೃತ ಒಳಾಂಗಣದ ಹಾಗೂ ಮೊದಲ ಮಹಡಿಯ ಉದ್ಘಾಟನಾ ಸಮಾರಂಭಕ್ಕೆ ಶನಿವಾರ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು</p></div>

ಶಿಗ್ಗಾವಿ ಅರ್ಬನ್ ಕೋ-ಆಪ್ ಬ್ಯಾಂಕಿನ ಬ್ಯಾಂಕ್ ರಜತ ಮಹೋತ್ಸವ, ನವೀಕೃತ ಒಳಾಂಗಣದ ಹಾಗೂ ಮೊದಲ ಮಹಡಿಯ ಉದ್ಘಾಟನಾ ಸಮಾರಂಭಕ್ಕೆ ಶನಿವಾರ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು

   

ಶಿಗ್ಗಾವಿ: ಆರ್ಥಿಕ ಸ್ವಾವಲಂಬನೆಗೆ ಅರ್ಬನ್ ಬ್ಯಾಂಕ್ ಗ್ರಾಹಕರಿಗೆ ಸಹಕಾರಿಯಾಗಿದೆ. ಹೀಗಾಗಿ ಕಳೆದ 25 ವರ್ಷಗಳಿಂದ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಹೆಮ್ಮರವಾಗಿ ಬೆಳೆದು ನಿಂತಿದೆ. ಸಹಕಾರಿ ಸಂಘಗಳಿಗೆ ಸಾರ್ವಜನಿಕರ ಸಹಕಾರವೇ ಆಧಾರ ಸ್ತಂಭವಾಗಿವೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಶನಿವಾರ ನಡೆದ ಶಿಗ್ಗಾವಿ ಅರ್ಬನ್ ಕೋ-ಆಪ್ ಬ್ಯಾಂಕಿನ ಬ್ಯಾಂಕ್ ರಜತ ಮಹೋತ್ಸವ, ನವೀಕೃತ ಒಳಾಂಗಣದ ಹಾಗೂ ಮೊದಲ ಮಹಡಿಯ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಹಕಾರಿ ಸಂಘಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ನೆರವಾಗುತ್ತಿದೆ. ಹೀಗಾಗಿ ಕೆಲವು ಸಹಕಾರಿ ಸಂಘಗಳು ಉತ್ತಮ ಸೇವೆಯಿಂದಾಗಿ ಬ್ಯಾಂಕ್ ಗಳಾಗಿ ಪರಿವರ್ತನೆ ಹೊಂದಿವೆ. ಸಂಘದ ಏಳ್ಗೆ ಬಯಸುವ ಮೂಲಕ ಕಂಠಿಣ ಪರಿಶ್ರಮದಿಂದ ಗ್ರಾಹಕರಿಗೆ ಬೇಕು, ಬೇಡಿಕೆಗಳನ್ನು ಈಡೇರಿಸಿದಾಗ ಮಾತ್ರ ಬ್ಯಾಂಕ್ ಗಳ ಅಭಿವೃದ್ಧಿ ಸಾಧ್ಯವಿದೆ ಎಂಬುವುದನ್ನು ಅರ್ಬನ್ ಬ್ಯಾಂಕ್ ಸಾಬೀತು ಪಡಿಸಿದೆ ಎಂದರು.

ರಾಜ್ಯ ಗಡಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಸಹಕಾರಿ ಸಂಘಗಳನ್ನು ಆರಂಭಿಸುವುದು ಸುಲಭವಾಗಿದೆ. ಆದರೆ ಅವುಗಳ ನಿರ್ವಹಣೆ ಮಾಡಿಕೊಂಡು ಯಶಸ್ವಿ ಪಡೆಯುವುದು ಬಹಳಷ್ಟು ಕಷ್ಟಕರವಾಗಿದೆ. ಅರ್ಬನ್ ಬ್ಯಾಂಕ್ ಅಂತಹ ಸಾಷ್ಟು ಸಮಸ್ಯೆ ಸವಾಲುಗಳನ್ನು ಎದುರಿಸಿಕೊಂಡು ಇಂದು ಬೃಹದಾಕಾರವಾಗಿ ಬೆಳೆದಿರುವುದು ಹರ್ಷದ ಸಂಗತಿ ಎಂದರು.

ಅರ್ಬನ್ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಡಾ.ಪಿ.ಆರ್.ಪಾಟೀಲ ಮಾತನಾಡಿ, ಆರಂಭದಲ್ಲಿ ಬ್ಯಾಂಕ್ ಸಾಕಷ್ಟು ತೊಂದರೆ ಅನುಭವಿಸಿಕೊಂಡು ಬಾಡಿಗೆ ಕಟ್ಟಡದಲ್ಲಿ ನಡೆಸಿಕೊಂಡು ಬಂದು ಈಗ ಸ್ವಂತ ಕಟ್ಟಡ ಹೊಂದಿದೆ. ಅದಕ್ಕೆ ದುರೀಣರ ಶ್ರಮ, ಒಗ್ಗಟ್ಟು ಕಾರಣವಾಗಿದೆ ಎಂದರು.

ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಸಂಸ್ಥಾಪಕ ನಿರ್ದೇಶಕ ಎಚ್.ಆರ್.ದುಂಡಿಗೌಡ್ರ ಮಾತನಾಡಿದರು. ಅರ್ಬನ್ ಬ್ಯಾಂಕಿನ ಅಧ್ಯಕ್ಷ ಜಗದೀಶ ತೊಂಡಿಹಾಳ ಅಧ್ಯಕ್ಷತೆ ವಹಿಸಿದ್ದರು.

ಗಂಜೀಗಟ್ಟಿ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪುರಸಭೆ ಅಧ್ಯಕ್ಷ ಸಿದಾರ್ಥಗೌಡ ಪಾಟೀಲ, ಬ್ಯಾಂಕಿನ ಉಪಾಧ್ಯಕ್ಷ ಅಶೋಕ ಬಂಕಾಪುರ, ನಿರ್ದೇಶಕರಾದ ಜನಾರ್ಧನ ಬ್ರಹ್ಮಾವರ, ಟಿ.ವಿ.ಸುರಗೀಮಠ, ಕುಮಾರ ಹೆಸರೂರ, ಉಮೇಶ ಗೌಳಿ, ಚಿದಾನಂದ ಕಮ್ಮಾರ, ಮಾಲತೇಶ ಗೌಳಿ, ಧರ್ಮಪ್ಪ ಧಾರವಾಡ, ಡಾ.ಬಿ.ಎಚ್.ವೀರಣ್ಣ, ಧೀರೇಂದ್ರ ಕುಂದಾಪುರ, ಕಾಶವ್ವ ಹಾವೇರಿ, ಚನ್ನಮ್ಮ ಬಡ್ಡಿ, ಬ್ಯಾಂಕಿನ ಮ್ಯಾನೇಜರ್ ಶಿವಾನಂದ ಪಾಟೀಲ, ಲೆಕ್ಕಾಧಿಕಾರಿ ಆರ್.ಪಿ.ಹೆಗಡೆ ಸೇರಿದಂತೆ ಬ್ಯಾಂಕಿನ ಎಲ್ಲ ಸದಸ್ಯರು, ಸಿಬ್ಬಂದಿ, ಸುತ್ತಲಿನ ಗ್ರಾಮಗಳ ಗ್ರಾಹಕರು ಇದ್ದರು.

ಗ್ರಾಹಕರು ಆರ್ಥಿಕ ಏಳ್ಗೆ ಕಂಡಾಗ ಮಾತ್ರ ಬ್ಯಾಂಕಿನ ಅಭಿವೃದ್ಧಿ ಸಾಧ್ಯ. ರೈತರಿಗೆ ವ್ಯಾಪಾರಸ್ಥರಿಗೆ ನೌಕರರಿಗೆ ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮೂಲ ಬ್ಯಾಂಕ್‌ ಉತ್ತಮ ಬೆಳವಣಿಗೆ ಹೊಂದಿದೆ
ಜಗದೀಶ ತೊಂಡಿಹಾಳ ಶಿಗ್ಗಾವಿ ಅರ್ಬನ್ ಕೋ-ಆಪ್ ಬ್ಯಾಂಕಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.