ADVERTISEMENT

‘ಸಾಹಿತ್ಯದಿಂದ ಸಮಾಜದಲ್ಲಿ ಪರಿವರ್ತನೆ’

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ಕೆಂಚಕ್ಕನವರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 5:18 IST
Last Updated 11 ಏಪ್ರಿಲ್ 2022, 5:18 IST
ರಟ್ಟೀಹಳ್ಳಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಜೆ.ಸಿ. ಹೊಸರಾಯಪ್ಪನವರ ಅವರ ‘ಕಡಲ ಸಂಸ್ಕಾರ’ ಕವನ ಸಂಕಲನವನ್ನು ಗಣ್ಯರು ಬಿಡುಗಡೆ ಮಾಡಿದರು
ರಟ್ಟೀಹಳ್ಳಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಜೆ.ಸಿ. ಹೊಸರಾಯಪ್ಪನವರ ಅವರ ‘ಕಡಲ ಸಂಸ್ಕಾರ’ ಕವನ ಸಂಕಲನವನ್ನು ಗಣ್ಯರು ಬಿಡುಗಡೆ ಮಾಡಿದರು   

ರಟ್ಟೀಹಳ್ಳಿ: ಸಮಾಜದಲ್ಲಿನ ಹಲವಾರು ಅನಿಷ್ಟ ಪದ್ಧತಿ ಹೋಗಲಾಡಿಸುವಲ್ಲಿ ಸಾಹಿತ್ಯ ಪ್ರಭಾವ ಬೀರುತ್ತದೆ ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ಕೆಂಚಕ್ಕನವರ ಹೇಳಿದರು.

ರಟ್ಟೀಹಳ್ಳಿ ಪಟ್ಟಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಿದ್ಧಲಿಂಗೇಶ್ವರ ವಿದ್ಯಾಪೀಠ ಇವರ ಸಂಯುಕ್ತ ಆಶ್ರಯದಲ್ಲಿ ಕಬ್ಬಿಣಕಂತಿಮಠ ಸಭಾಭವನದಲ್ಲಿ ಭಾನುವಾರ ಜರುಗಿದ ಶಿಕ್ಷಕ, ಸಾಹಿತಿ ಜೆ.ಸಿ. ಹೊಸರಾಯಪ್ಪನವರ ರಚಿಸಿದ ಬೊಚ್ಚಲ ‘ಕಡಲಸಂಸ್ಕಾರ’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಾಲ್ಯವಿವಾಹ, ಸತಿಸಹಗಮನ ಪದ್ಧತಿ, ಇನ್ನೂ ಹಲವಾರು ಅನಿಷ್ಟ ಪದ್ಧತಿಗಳ ನಿರ್ಮೂಲನೆಯಲ್ಲಿ ಲೇಖಕರ ಅಂತರಾಳದ ನುಡಿ ಪ್ರಭಾವ ಬೀರಿದೆ. ಸಾಹಿತಿ, ಓದುಗ, ವಿಮರ್ಶಕ ಇದ್ದಲ್ಲಿ ಸಮಾಜ ಅಭಿವೃದ್ಧಿ ಪಥದಂತ ನಡೆಯಲು ಸಾಧ್ಯ ಎಂದರು. ಜೀವನಾನುಭವವೇ ಸಾಹಿತ್ಯಕ್ಕೆ ಪ್ರೇರಣೆ, ಕವನ ರಚನೆಯಿಂದ ಕವಿಗೆ ಆತ್ಮಸಂತೋಷ ಒಂದೆಡೆಯಾದರೆ, ಸಮಾಜದಲ್ಲಿನ ಬದಲಾವಣೆ ಇನ್ನೊಂದಡೆ ಸಾಧ್ಯ ಎಂದರು.

ADVERTISEMENT

ಕೃತಿ ಪರಿಚಯ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಜನದತ್ತ ಹಡಗಲಿ ಮಾತನಾಡಿ, ಶಿಕ್ಷಕ ಜೆ.ಸಿ. ಹೊಸರಾಯಪ್ಪನವರ ಒಬ್ಬ ಸೂಕ್ಷ್ಮ ಸಂವೇದನಾಶೀಲ ಮನಸ್ಸಿನ ಕ್ರಿಯಾಶೀಲ ಬರಹಗಾರ ಎಂಬುದನ್ನು ತಮ್ಮ ಕವನ ಸಂಕಲನದ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.

ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ತಿಪ್ಪಾಯಿಕೊಪ್ಪದ ಗುರುಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಘವೇಂದ್ರ ಎ.ಜಿ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಪ್ರೇಮಾನಂದ ಲಕ್ಕಣ್ಣನವರ ಕೃತಿ ಬಿಡುಗಡೆ ಮಾಡಿದರು. ಮಾಸೂರಿನ ಎಸ.ಬಿ.ಪಾಟೀಲ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಆರ್. ಕೋಣ್ತಿ ಪ್ರಸ್ತಾವಿಕವಾಗಿ ಮಾತನಾಡಿದರು.

ಗಣೇಶ ವೇರ್ಣೇಕರ, ಶೇಖರ ಭಜಂತ್ರಿ, ಎಂ.ಎಂ. ಹರವಿಶೆಟ್ಟರ, ಡಿ. ಭರಮಗೌಡ, ಗುಡ್ಡಾಚಾರಿ ಕಮ್ಮಾರ, ರಾಜು ಹರವಿಶೆಟ್ಟರ, ಸುಧಾ ಟಿ.ಆರ್. ಎನ್.ಸಿ. ಕಠಾರೆ, ಎಂ.ಎಚ್. ದಿವಿಗೀಹಳ್ಳಿ, ಮುರಗೆಪ್ಪ ಬೆಟ್ಟಣ್ಣನವರ ಎಂ.ಸಿ. ತುಮ್ಮಿನಕಟ್ಟಿ. ಸಿ.ಡಿ. ಕರಿಯಣ್ಣ
ನವರ, ಸಿ.ಎಫ್. ಜಾಡರ, ಶೋಭಾ ಕೊಪ್ಪದ, ವಿ.ಹೆಚ್. ನಾಡರ, , ಎಸ್.ಕೆ. ಬಾಳಂಬೀಡ, ಸಿ.ಬಿ. ಅಂಗಡಿ, ಉಪಸ್ಥಿತ
ರಿದ್ದರು. ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘ ಮತ್ತು ಹಲವಾರು ಸಂಘಟನೆ ಪದಾಧಿಕಾರಿಗಳು ಕವನ ಸಂಕಲ ರಚಿಸಿದ ಶಿಕ್ಷಕ ಜೆ.ಸಿ. ಹೊಸರಾಯಪ್ಪನವರನ್ನು ಸನ್ಮಾನಿಸಿ ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.