
ಹಾನಗಲ್: ಹಾನಗಲ್ ಲಿಂ.ಕುಮಾರ ಶಿವಯೋಗಿಗಳವರ 96ನೇ ಪುಣ್ಯ ಸ್ಮರಣೋತ್ಸವ ಫೆ. 6 ರಿಂದ 8ರವರೆಗೆ ಇಲ್ಲಿನ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಕುಮಾರಜ್ಜನ ಉತ್ಸವವಾಗಿ ನೆರವೇರಲಿದೆ.
ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ನಡೆಯುವ 3 ದಿನಗಳ ಕಾರ್ಯಕ್ರಮದ ಮೊದಲ ದಿನ ಫೆ. 6ರಂದು ಬೆಳಿಗ್ಗೆ 8ಕ್ಕೆ ಬಾಳೂರು ಅಡವಿಸ್ವಾಮಿ ಮಠದ ಕುಮಾರಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಅಕ್ಕಿಆಲೂರಿನ ಶಿವಬಸವ ಸ್ವಾಮಿಗಳು ಸಮ್ಮುಖ ವಹಿಸುವರು.
ಸಂಜೆಯ ಧರ್ಮಸಭೆಯಲ್ಲಿ ಶಿರಸಿ ಅಟವಿ ಶಿವಲಿಂಗ ಸ್ವಾಮಿಗಳು, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ಹೋತನಹಳ್ಳಿ ಶಂಕರಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ಹಾವೇರಿ ಶರಣ ಚಿಂತಕ ಜಗದೀಶ ಹತ್ತಿಕೋಟಿ, ಹುಬ್ಬಳ್ಳಿಯ ಮಲ್ಲಿಕಾರ್ಜುನ ರಡ್ಡೇರ ಉಪನ್ಯಾಸ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ಶ್ರೀನಿವಾಸ ಮಾನೆ, ವಿಧಾನಪರಿಷತ್ ಸದಸ್ಯರಾದ ಸಲೀಂ ಅಹ್ಮದ, ಪ್ರದೀಪ ಶೆಟ್ಟರ, ಗಣ್ಯರಾದ ಮಂಜುನಾಥ ಕುನ್ನೂರ, ಆನಂದಸ್ವಾಮಿ ಗಡ್ಡದೇವರಮಠ, ಯಶೋದಾ ವಂಟಗೋಡಿ, ಎಸ್.ರೇಣುಕಾ ಪಾಲ್ಗೊಳ್ಳುವರು. ಪೂಜಾ ಸವದತ್ತಿ ಅವರಿಗೆ ಗೌರವ ಶ್ರೀರಕ್ಷೆ ನೀಡಲಾಗುತ್ತದೆ.
ಫೆ.7 ರಂದು ಬೆಳಿಗ್ಗೆ ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದಿಂದ ಹಾನಗಲ್ ವಿರಕ್ತಮಠದವರೆಗೆ ‘ನಮ್ಮ ನಡಿಗೆ ಗುರುವಿನೆಡೆಗೆ ಪಾದಯಾತ್ರೆ’ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಜಡೆ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಚಿಕಲಪವರವಿ ಸದಾಶಿವ ಸ್ವಾಮೀಜಿ, ಹೇರೂರು ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು ಸಮ್ಮುಖ ವಹಿಸುವರು. ಬೆಂಗಳೂರಿನ ಡಾ.ಗಿರಿಧರ ಖಜೆ, ಶಿಗ್ಗಾವಿಯ ಡಾ.ವಿಜಯಲಕ್ಷ್ಮೀ ಗೇಟಿಯವರ ಉಪನ್ಯಾಸ ನೀಡುವರು. ಸಂಸದ ಬಸವರಾಜ ಬೊಮ್ಮಾಯಿ, ಗಣ್ಯರಾದ ಎಸ್.ವಿ.ಸಂಕನೂರ, ಶಿವರಾಜ ಸಜ್ಜನರ, ಮೊಹನ ಭಾಸ್ಕರ ಹೆಗಡೆ, ಡಾ.ಸಂಜೀವ ಪಾಟೀಲ ಪಾಲ್ಗೊಳ್ಳುವರು.
ಫೆ. 8ರಂದು ಬೆಳಿಗ್ಗೆ 11ಕ್ಕೆ ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಹಾನಗಲ್ ಲಿಂ.ಕುಮಾರಶಿವಯೋಗಳವರ ಭಾವಬಿಂಬದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಸಂಜೆ ಮುನವಳ್ಳಿ ಮುರುಘೇಂದ್ರ ಸ್ವಾಮೀಜಿ, ಬಿಜಕಲ್ಲ ಶಿವಲಿಂಗ ಸ್ವಾಮೀಜಿ, ಮಾದನಹಿಪ್ಪರಗಿ ಆಭಿನವ ಶಿವಲಿಂಗ ಸ್ವಾಮೀಜಿ, ಅಕ್ಕಿಆಲೂರು ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ಧರ್ಮಸಭೆ ನಡೆಯಲಿದೆ. ಶಿರಾಳಕೊಪ್ಪದ ವೀರಬಸವ ದೇವರು, ಬಬಲೇಶ್ವರದ ಮಲ್ಲಿಕಾರ್ಜುನ ದೇವರು, ಚಿಂಚಣಿ ಶಿವಪ್ರಸಾದ ದೇವರು, ಜಮಖಂಡಿ ಆನಂದ ದೇವರು ಅವರಿಗೆ ಶ್ರೀರಕ್ಷೆ ನಡೆಯಲಿದೆ. ಹಾವೇರಿ ಜಿಲ್ಲಾಧಿಕಾರಿ ವಿಜಯಮ ಮಹಾಂತೇಶ, ಧಾರವಾಡದ ಮಹೇಶ ಮಾಶಾಳ ಪಾಲ್ಗೊಳ್ಳುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.