ADVERTISEMENT

ನಾಮಪತ್ರ ಸಲ್ಲಿಕೆಗೆ ಕೊನೆ ದಿನ 16

ಬ್ಯಾಡಗಿಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಟಿಕೆಟ್ ಹಂಚಿಕೆಯ ಸವಾಲು, ಬಂಡಾಯದ ಭೀತಿ

​ಪ್ರಜಾವಾಣಿ ವಾರ್ತೆ
Published 15 ಮೇ 2019, 15:22 IST
Last Updated 15 ಮೇ 2019, 15:22 IST

ಹಾವೇರಿ:ಜಿಲ್ಲೆಯ ಬ್ಯಾಡಗಿ ಮತ್ತು ಶಿಗ್ಗಾವಿ ಪುರಸಭೆಗಳಿಗೆ ಚುನಾವಣೆ ನಡೆಯುತ್ತಿದ್ದು, ಬುಧವಾರ 87 ಸೇರಿದಂತೆ ಈ ತನಕ ಒಟ್ಟು 115 ನಾಮಪತ್ರಗಳು ಸಲ್ಲಿಕೆಯಾಗಿವೆ. ತಲಾ 23 ವಾರ್ಡ್‌ಗಳಿದ್ದು, ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆ ದಿನವಾಗಿದೆ.

ಮೇ 9ರಂದು ಅಧಿಸೂಚನೆ ಪ್ರಕಟಗೊಂಡಿದ್ದರೂ, ಮಂಗಳವಾರ ತನಕ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿಯ ಟಿಕೆಟ್‌ ನಿರೀಕ್ಷೆಯಲ್ಲಿ ಬಹುತೇಕ ಆಕಾಂಕ್ಷಿಗಳು ಇದ್ದಾರೆ. ಹೀಗಾಗಿ, ಕೊನೆ ದಿನವಾದ ಮೇ 16ರಂದು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 20 ಕೊನೆ ದಿನವಾಗಿದೆ.

ಶಿಗ್ಗಾವಿ ವರದಿ

ADVERTISEMENT

ಶಿಗ್ಗಾವಿ ಪುರಸಭೆಗೆ ಬುಧವಾರ ಕಾಂಗ್ರೆಸ್–15‌, ಬಿಜೆಪಿ–22, ಜೆಡಿಎಸ್–1‌ ಹಾಗೂ ಪಕ್ಷೇತರ–18 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ತಹಶೀಲ್ದಾರ್‌ ಪ್ರಶಾಂತ್‌ ಚನ್ನಗೊಂಡ ತಿಳಿಸಿದ್ದಾರೆ

ಬ್ಯಾಡಗಿ ವರದಿ:

ಬ್ಯಾಡಗಿ ಪುರಸಭೆಗೆ ಈ ತನಕ ಬಿಜೆಪಿ-11 ಕಾಂಗ್ರೆಸ್-2, ಜೆಡಿಎಸ್-5 ಪಕ್ಷೇತರ-15 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಆರು ವಾರ್ಡ್‌ಗಳಲ್ಲಿ ಇನ್ನೂ ಯಾರೂ ಉಮೇದುವಾರಿಕೆಯನ್ನು ಸಲ್ಲಿಸಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿಯ ಟಿಕೆಟ್ ಹಂಚಿಕೆಯ ಕಗ್ಗಂಟಿನಿಂದಾಗಿ, ಉಮೇದುವಾರಿಕೆ ಕಡಿಮೆಯಾಗಿದೆ.

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಪುತ್ರ ಬಾಲಚಂದ್ರ ಪಾಟೀಲ 20ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಲ್ಲದೇ, ಮಾಜಿ ಸದಸ್ಯರಾದ ಮಲ್ಲನಗೌಡ ಭದ್ರಗೌಡ್ರ 9ನೇ ವಾರ್ಡ್, ಮಂಜುನಾಥ ಬೋವಿ 17ನೇ ವಾರ್ಡ್, ಮತ್ತು ಗುಡ್ಡಪ್ಪ ಆಡಿನವರ 18ನೇ ವಾರ್ಡ್‌ನಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.