ADVERTISEMENT

ಉತ್ತಮ ಪ್ರಜೆಗಳಾಗಿ ಜೀವನ ನಡೆಸಿ: ಇ.ರಾಜೀವಗೌಡ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 15:17 IST
Last Updated 3 ಡಿಸೆಂಬರ್ 2021, 15:17 IST
ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳಿಗೆ ‘ನವಚೇತನ’ ಕೌಶಲ ಅಭಿವೃದ್ಧಿ ತರಬೇತಿ ಹಾಗೂ ಧ್ಯಾನ– ಯೋಗ ಮತ್ತು ಪ್ರಾಣಾಯಾಮ ಶಿಬಿರ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು 
ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳಿಗೆ ‘ನವಚೇತನ’ ಕೌಶಲ ಅಭಿವೃದ್ಧಿ ತರಬೇತಿ ಹಾಗೂ ಧ್ಯಾನ– ಯೋಗ ಮತ್ತು ಪ್ರಾಣಾಯಾಮ ಶಿಬಿರ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು    

ಹಾವೇರಿ: ‘ಓದಿನ ಜೊತೆಗೆ ಕೌಶಲಾಧಾರಿತ ತರಬೇತಿ ಪಡೆದುಕೊಂಡು ಮುಂದಿನ ಜೀವನೋಪಾಯಕ್ಕೆ ಬಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ನಡೆಸಿ’ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಇ.ರಾಜೀವಗೌಡ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಹಾಗೂ ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆ ಆಶ್ರಯದಲ್ಲಿ ಹಾವೇರಿ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದ ಕಾರಾಗೃಹಗಳಲ್ಲಿರುವ ಬಂದಿಗಳಿಗೆ ‘ನವಚೇತನ’ ಎಂಬ ಶೀರ್ಷಿಕೆಯಡಿ ಕೌಶಲ ಅಭಿವೃದ್ಧಿ ತರಬೇತಿ ಹಾಗೂ ಧ್ಯಾನ – ಯೋಗ ಮತ್ತು ಪ್ರಾಣಾಯಾಮ ಶಿಬಿರ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪುಟ್ಟರಾಜು ಮಾತನಾಡಿ, ‘ಉತ್ತಮ ಉದ್ದೇಶವುಳ್ಳ ಈ ಕೌಶಲ ಕಾರ್ಯಾಗಾರ ಮತ್ತು ಧ್ಯಾನ ಶಿಬಿರದ ಸದುಪಯೋಗ ಪಡೆದುಕೊಂಡು ಉತ್ತಮ ರೀತಿಯಲ್ಲಿ ಬದುಕಿ’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಕಾರಾಗೃಹ ಅಧೀಕ್ಷಕ ಲೋಕೇಶ ಟಿ.ಕೆ. ಮಾತನಾಡಿ, ‘ಜಿಲ್ಲಾ ಕಾರಾಗೃಹದಲ್ಲಿರುವ ಬಂದಿಗಳಿಗೆ ಅವರ ಆಸಕ್ತಿ, ವೃತ್ತಿ ಹಿನ್ನೆಲೆ ಹಾಗೂ ಬಿಡುಗಡೆ ನಂತರ ಹೊರಗಡೆ ಇರುವ ಕೆಲಸದ ಅವಕಾಶ ಬಗ್ಗೆ ಅರಿವು ಮೂಡಿಸಲು ಒಟ್ಟು 60 ಬಂದಿಗಳಿಗೆ ಕಂಪ್ಯೂಟರ್ ತರಬೇತಿ, 30 ಬಂದಿಗಳಿಗೆ ಹೊಲಿಗೆ ಯಂತ್ರ ತರಬೇತಿ ಪಡೆಯುತ್ತಿದ್ದಾರೆ. ತಾತ್ಕಾಲಿಕವಾಗಿ ತಮ್ಮ ಎಲ್ಲಾ ಕಷ್ಟಗಳನ್ನು ಬದಿಗೊಟ್ಟು ಮುಕ್ತ ಮನಸ್ಸಿನಿಂದ ಸ್ವಯಂ ಇಚ್ಛೆಯಿಂದ ಒಂದುವರೆ ತಿಂಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಪ್ರಮಾಣಪತ್ರ ಪಡೆಯಿರಿ’ ಎಂದು ತಿಳಿಸಿದರು.

ಬೆಂಗಳೂರಿನ ‘ಆರ್ಟ್ ಆಫ್ ಲಿವಿಂಗ್’ ಶಿಕ್ಷಕರಾದ ವಾಣಿಶ್ರೀ, ಮಧುಬಾಲ, ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆ ಸಂಜಯ ಕೋರೆ, ಅಕ್ಷರ ಫೌಂಡೇಷನ್ ಸಂಸ್ಥಾಪಕ ಕೆ.ಆರ್ ಹತ್ತಿಮತ್ತೂರು, ಹಿರೇಕೆರೂರ ಜಿ.ಐ.ಎಸ್.ಎಸ್. ಫೌಂಡೇಷನ್ ಮಹಮ್ಮದ್ ಇಕ್ಬಾಲ್ ಮಕದರ್, ಜಿಲ್ಲಾ ಕಾರಾಗೃಹ ಜೈಲರ್ ಯಲ್ಲಮ್ಮ ಎಂ ಹರವಿ ಇದ್ದರು.ಕಾರಾಗೃಹದ ಸಿಬ್ಬಂದಿಗಳಾದ ಸಂತೋಷ್ ಐಹೊಳೆ ಸ್ವಾಗತಿಸಿದರು ಹಾಗೂ ಸಿದ್ಧಾರೂಢ ನಾವಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.