ರಾಣೆಬೆನ್ನೂರು: ‘ಸಂಘದ ಸಮಸ್ತ ಷೇರುದಾರ ಸದಸ್ಯರು ಹಾಗೂ ಠೇವಣಿದಾರರ ಸಹಕಾರದಿಂದ ಏಕಲವ್ಯ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಸ್ವಂತ ಕಟ್ಟಡ ಹೊಂದಲು ಸಹಕಾರಿಯಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ನಿಂಗಪ್ಪ ಎಚ್. ಹಳ್ಳಳ್ಳೆಪ್ಪನವರ ಹೇಳಿದರು.
ನಗರದ ಶ್ರೀ ಏಕಲವ್ಯ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಕಟ್ಟಡದ ಸಭಾಂಗಣದಲ್ಲಿ ಶನಿವಾರ ನಡೆದ 25ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿಸಿದಾಗ ಸೊಸೈಟಿ ಅಭಿವೃದ್ಧಿ ಹೊಂದಲು ಸಾಧ್ಯ. ಇದು ಕೇವಲ ಒಂದು ವರ್ಗಕ್ಕೆ ಸಿಮೀತವಲ್ಲ. ಎಲ್ಲಾ ವರ್ಗದ ಜನರು ಸಂಘದ ನಿಯಮಗಳಿಗೆ ಅನುಗುಣವಾಗಿ ವ್ಯವಹಾರ ಮಾಡಿ ಆರ್ಥಿಕವಾಗಿ ಸಬಲರಾಗಿ’ ಎಂದರು.
ಉಪಾಧ್ಯಕ್ಷೆ ಗೌರಮ್ಮ ಕೆ. ಕರೇಭರಮಣ್ಣನವರ, ಪುಷ್ಪಲತಾ ದೋಣಗೊಂದಿ, ಆನಂದಪ್ಪ ಕೆ.ಎಂ, ಹನುಮಂತ ಎಚ್. ಮೀನಕಟ್ಟಿ, ಕೆ.ಬಿ. ಲೆಂಕೆಣ್ಣನವರ, ಹನುಮಂತಪ್ಪ ಅಮರಾವತಿ, ಎಂ.ಸಿ. ಕಮ್ಮಾರ, ಆರ್.ಎಸ್. ಗೊಂದ್ಯಾಳಿ, ಕೆ.ಎಚ್. ಸಣ್ಣಬೊಮ್ಮಾಜಿ, ರವೀದ್ರಗೌಡ ಎಫ್. ಪಾಟೀಲ, ಜಿ.ಬಿ. ಕನ್ನಜ್ಜನವರ, ನಾಗಪ್ಪ ಕಾಡಜ್ಜಿ, ಹೊನ್ನಪ್ಪ ಬಾದಿ, ಚಂದ್ರಪ್ಪ ಬೇಡರ, ಕರಬಸಪ್ಪ ಕೂಲೇರ, ಬಸವರಾಜ ಬಿ.ಕೆ. ಎಚ್.ಎಂ. ಲೆಕ್ಕಿಕೊನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.