ರಟ್ಟೀಹಳ್ಳಿ: ತಾಲ್ಲೂಕಿನ ಹಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಲಾಪುರ, ಹಳ್ಳೂರು, ಪುರದಕೇರಿ, ಚಟ್ನಳ್ಳಿ, ಕಿರಗೇರಿ ಗ್ರಾಮಸ್ಥರಿಗೆ ಉದ್ಯೋಗ ನೀಡುವಂತೆ ಸ್ಥಳೀಯರು ಸೋಮವಾರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಗುವಳಿ ಭೂಮಿಯನ್ನು ಕಾರ್ಖಾನೆಗೆ ನೀಡಲಾಗಿದ್ದು, ಇದರಿಂದ ಜನರಿಗೆ ಆರ್ಥಿಕ ತೊಂದರೆಯಾಗಿದೆ. ಪ್ರತಿ ಕುಟುಂಬದ ನಿರುದ್ಯೋಗಿ ಯುವಕ, ಯುವತಿಯರಿಗೆ ಕಾರ್ಖಾನೆ ಮಂಡಳಿ ಉದ್ಯೋಗ ನೀಡಬೇಕು. ಇಲ್ಲವಾದಲ್ಲಿ ಕಾರ್ಖಾನೆ ಅನುಮತಿ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದರು.
ರವೀಂದ್ರ ಮಲೇಬೆನ್ನೂರ, ಕೇಶಪ್ಪ ಬಳೂಡಿ, ಸುರೇಶ ತಳವಾರ, ನಾಗರಾಜ ಕತ್ತಗಿ, ಮಂಜುನಾಥ ಇದರಮನೆ, ಸುರೇಶ ಓಲೇಕಾರ, ಗಿರೀಶ ಭೋವಿ, ಬಿಸಾಟಪ್ಪ ಓಲೇಕಾರ, ಏತೋಜಿರಾವ್ ಶಿಂಧೆ, ಚನ್ನವೀರಪ್ಪ ಕಮಲಾಪುರ, ಧರ್ಮರಾಜ್ ಹೊನ್ನಜ್ಜಿ ಇದ್ದರು.