ADVERTISEMENT

ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಾಸಕರಿಂದ ಸನ್ಮಾನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:33 IST
Last Updated 23 ಏಪ್ರಿಲ್ 2025, 15:33 IST
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ತೋಟಗಂಟಿ ಗ್ರಾಮದ ಸಂಗೀತಾ ಮೂಲಿಮನಿಯ ಹಾಗೂ ಪಾಲಕರನ್ನು ಶಾಸಕ ಯು.ಬಿ.ಬಣಕಾರ ಸನ್ಮಾನಿಸಿದರು
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ತೋಟಗಂಟಿ ಗ್ರಾಮದ ಸಂಗೀತಾ ಮೂಲಿಮನಿಯ ಹಾಗೂ ಪಾಲಕರನ್ನು ಶಾಸಕ ಯು.ಬಿ.ಬಣಕಾರ ಸನ್ಮಾನಿಸಿದರು   

ರಟ್ಟೀಹಳ್ಳಿ: ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಮನೆಗೆ ತೆರಳಿ ಶಾಸಕ ಯು.ಬಿ. ಬಣಕಾರ ಅವರನ್ನು ಸನ್ಮಾನಿಸಿದರು.

ಕಲಾ ವಿಭಾಗದಲ್ಲಿ ಮೇದೂರು ಗ್ರಾಮದ ಗಜಾನನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಂದಿನಿ ಖಂಡೇಬಾಗೂರು, ವಿಜ್ಞಾನ ವಿಭಾಗದಲ್ಲಿ ರಟ್ಟೀಹಳ್ಳಿ ಸರ್ಕಾರಿ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ಸಂಗೀತಾ ಮೂಲಿಮನಿ, ವಾಣಿಜ್ಯ ವಿಭಾಗದಲ್ಲಿ ರಟ್ಟೀಹಳ್ಳಿ ಪ್ರಿಯದರ್ಶಿನಿ ಕಾಲೇಜಿನ ವಿದ್ಯಾರ್ಥಿನಿ ವನಿತಾ ಕೆಂಚರೆಡ್ಡಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು, ಶಾಸಕರು ಸನ್ಮಾನಿಸಿ, ಶುಭ ಹಾರೈಸಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಗುಡ್ಡಾಚಾರಿ ಕಮ್ಮಾರ, ಮುಖಂಡರಾದ ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ಮಹೇಶ ಗುಬ್ಬಿ, ರವೀಂದ್ರ ಮುದಿಯಪ್ಪನವರ, ತಿರಕಪ್ಪ ಕರಡೇರ, ರಾಮಚಂದ್ರಪ್ಪ ತಳವಾರ, ನಿಂಗರಾಜ ಕರಡೇರ, ಹಾಗೂ ಗ್ರಾಮಸ್ಥರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.