ಸವಣೂರು: ಇಂದಿನ ಯುವ ಸಮೂಹ ಮನೆಯಲ್ಲಿ ತಂದೆ, ತಾಯಿಯನ್ನು ಯಾರು ಭಯ ಭಕ್ತಿಯಿಂದ ಹೃದಯದಿಂದ ಪೂಜಿಸುತ್ತಾರೋ ಅಂಥವರು ಜೀವನದಲ್ಲಿ ಮುಕ್ತಿ ಹೊಂದಲು ಸಾಧ್ಯ ಎಂದು ಕೂಡಲ ಗುರುನಂಜೇಶ್ವರ ಮಠದ ಗುರುಮಹಾಶ್ವೇರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಂತ್ರವಾಡಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ಆವಣರದಲ್ಲಿ 17ನೇ ವರ್ಷದ ಗ್ರಾಮದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಶ್ರೀಗಳು, ಮನುಷ್ಯನ ದುರಾಸೆ ಬಹಳ ಕೆಟ್ಟದ್ದು ಅದನ್ನು ಹೋಗಲಾಡಿಸಲು ದೇವಿಯ ಪುರಾಣ, ಪ್ರವಚನ ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿಯಾಗಿದೆ. ನಿಮ್ಮ ಜೀವನ ಪಾವನವಾಗಲು ಪುರಾಣ ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳುವದು ಅವಶ್ಯವಿದೆ. ಸದ್ಬಕ್ತರು ಗ್ರಾಮದೇವತೆಯ ಮಹಾತ್ಮೆ ಆಲಿಸಿ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ಸತತ 9 ದಿನಗಳ ಕಾಲ ದೇವಿ ಮಹಾತ್ಮೆಯ ಪ್ರವಚನ ಕೈಗೊಳ್ಳಲಿರುವ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿಯ ವೇ.ಮೂ. ಶಿವಯ್ಯಸ್ವಾಮಿಜೀ 4ನೇ ಅಧ್ಯಾಯ ವಾಚಿಸಿ ದೇವಿ ಮಹಾತ್ಮೆಯನ್ನು ಸಾರಿದರು. ಜೇವರ್ಗಿಯ ವೀರೇಶಕುಮಾರ ಕಟ್ಟಿ ಸಂಗಾವಿ ತಬಲಾ ಸಾಥ್ ನೀಡಿದರು. ಖ್ಯಾತ ಗಾಯಕ ಶ್ರೀಶೈಲ ಹಡಗಲಿ ಅವರಿಂದ ಗಾನಸುಧೆ ಮೊಳಗಿತು.
ಪುರಾಣ ಪ್ರವಚನದ ಅಂಗವಾಗಿ ಜಗದೇಶ ಅಂಗಡಿ ಹಾಗೂ ಮಕ್ಕಳು ಪ್ರಸಾದ ಸೇವೆ ಸಲ್ಲಿಸಿದರು. ಗುರುಸಿದ್ದಯ್ಯ ಹಿರೇಮಠ, ಜಗದೇಶ ಅಂಗಡಿ, ಸತೀಶ ಅಂಗಡಿ, ಫಕ್ಕೀರೇಶ ನೆಲ್ಲೂರ ಹಾಗೂ ಗ್ರಾಮಸ್ಥರು ಇದ್ದರು. ಶಿಕ್ಷಕ ರವಿ ಅರಗೋಳ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.