ADVERTISEMENT

ದೇಶದ ಏಳ್ಗೆಗಾಗಿ ಏಕತಾ ಭಾವನೆ ಮುಖ್ಯ: ನಾಗನಗೌಡ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 2:55 IST
Last Updated 1 ನವೆಂಬರ್ 2025, 2:55 IST
ಶಿಗ್ಗಾವಿ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಗಂಗೆಭಾವಿ ಕೆ.ಎಸ್.ಆರ್.ಪಿ 10ನೇ ಪಡೆ. ಶಿಗ್ಗಾವಿ ಪೊಲೀಸ್ ಠಾಣೆ ಸಹಯೋಗದಲ್ಲಿ ಸರ್ದಾರ್‌ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನದ ಅಂಗವಾಗಿ ನಡೆದ ’ರಾಷ್ಟ್ರೀಯ ಏಕತೆಗಾಗಿ ಓಟ‘ಕ್ಕೆ ಕಮಾಂಡಂಟ್ ನಾಗನಗೌಡ ಬಿ.ಮೇಳ್ಳಾಗಟ್ಟಿ ಚಾಲನೆ ನೀಡಿದರು

ಶಿಗ್ಗಾವಿ: ದೇಶದ ಏಳ್ಗೆಗಾಗಿ ಸರ್ವ ಸಮುದಾಯದ ಜನರಲ್ಲಿ ಸಮಾನತೆ ಮತ್ತು ರಾಷ್ಟ್ರೀಯ ಏಕತಾ ಮನೋಭಾವನೆ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಎಂದು ಗಂಗೆಭಾವಿ ಕೆ.ಎಸ್.ಆರ್.ಪಿ 10ನೇ ಪಡೆ ಕಮಾಂಡಂಟ್ ನಾಗನಗೌಡ ಬಿ. ಮೇಳ್ಳಾಗಟ್ಟಿ ಹೇಳಿದರು.

ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಗಂಗೆಭಾವಿ ಕೆ.ಎಸ್.ಆರ್.ಪಿ 10ನೇ ಪಡೆ. ಶಿಗ್ಗಾವಿ ಪೊಲೀಸ್ ಠಾಣೆ ಸಹಯೋಗದಲ್ಲಿ ಸರ್ದಾರ್‌ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನದ ಅಂಗವಾಗಿ ನಡೆದ ’ರಾಷ್ಟ್ರೀಯ ಏಕತೆಗಾಗಿ ಓಟ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗತ್ತಿನಲ್ಲಿ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತವಾಗಿದ್ದು, ಅದರಿಂದ ಭಾರತ ದೇಶ ಜಗತ್ತಿಗೆ ವಿಶ್ವಗುರು ಎನ್ನಿಸಿಕೊಂಡಿದೆ ಎಂದರು.

ADVERTISEMENT

ಶಿಗ್ಗಾವಿ ಪೊಲೀಸ್ ಠಾಣೆ ಡಿ.ವೈ.ಎಸ್.ಪಿ ಗುರುಶಾಂತಪ್ಪ ಕೆ.ವಿ, ಸಿಪಿಐ ಅನಿಲಕುಮಾರ ರಾಠೋಡ, ಪಿ.ಎಸ್.ಐ ವೀರಭದ್ರಯ್ಯ ಹಿರೇಮಠ, ಗಂಗೆಭಾವಿ ಕೆ.ಎಸ್.ಆರ್.ಪಿ 10ನೇ ಪಡೆ ಸಹಾಯಕ ಕಮಾಂಡಂಟ್ ಮಂಜಪ್ಪ ಕೋಟಿಹಾಳ, ಅಧಿಕಾರಿಗಳಾದ ಹನುಮೇಶ ಜಿ, ಸಂತೋಷ ವಸ್ತ್ರದ, ರಾಜೇಂದ್ರ ಬಿ,ಶಿರಗುಪ್ಪಿ ಸೇರಿದಂತೆ ಗಂಗೆಭಾವಿ ಕೆ.ಎಸ್.ಆರ್.ಪಿ 10ನೇ ಪಡೆ. ಶಿಗ್ಗಾವಿ ಪೊಲೀಸ್ ಠಾಣೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.