ಹಿರೇಕೆರೂರ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ತಹಶೀಲ್ದಾರರಾದ ಎಚ್.ಪ್ರಭಾಕರಗೌಡ ಅವರಿಗೆ ನಟ ಕಮಲ್ ಹಾಸನ್ ಚಿತ್ರ ಬಿಡುಗಡೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಕನ್ನಡಿಗರ ಭಾವನೆಗೆ ಧಕ್ಕೆ ತರುವಂತೆ ‘ತಮಿಳು ಭಾಷೆಯಿಂದ ಕನ್ನಡ ಭಾಷೆಯ ಉಗಮವಾಗಿದೆ’ ಎಂಬ ವಿವಾದಾತ್ಮಕ, ದುರುದ್ದೇಶಪೊರಿತ ಹೇಳಿಕೆಯನ್ನು ನಟ, ರಾಜಕಾರಿಣಿ ಕಮಲ್ ಹಾಸನ್ ನೀಡಿದ್ದಾರೆ. ಈ ಸುಳ್ಳು, ಆಧಾರ ರಹಿತ ಹೇಳಿಕೆ ಕನ್ನಡ ಭಾಷೆಯ ಶ್ರೀಮಂತ ಇತಿಹಾಸ, ಸಂಸ್ಕ್ರತಿ ಮತ್ತು ಸ್ವಾಭಿಮಾನಕ್ಕೆ ಆಘಾತವನ್ನುಂಟು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಭರಮಪ್ಪ ಡಮ್ಮಳ್ಳಿ, ಅಶೋಕ್ ಬಡಿಗೇರ, ಚಂದ್ರು ಕೂಟಿಹಾಳ, ಈರಪ್ಪ ಬಣಕಾರ, ರಾಜಶೇಖರ್ ಬಳ್ಳಾರಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.