ADVERTISEMENT

ಹಾವೇರಿ: ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:27 IST
Last Updated 16 ಜುಲೈ 2020, 17:27 IST
ಸ್ವಯಂಪ್ರೇರಿತ ಬಂದ್‌ ನಿರ್ಣಯಕ್ಕೆ ನಮ್ಮ ಬೆಂಬಲವಿಲ್ಲ ಎಂದು ನಗರದ ಕಿರಾಣಿ ವರ್ತಕರ ಸಂಘದ ಸದಸ್ಯರು ಗುರುವಾರ ತಹಶೀಲ್ದಾರ್‌ ಶಂಕರ್‌ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಗಂಗಾಧರ ಮಳಗಿ, ನಗರಸಭಾ ಸದಸ್ಯ ಗಿರೀಶ ತುಪ್ಪದ ಇದ್ದಾರೆ 
ಸ್ವಯಂಪ್ರೇರಿತ ಬಂದ್‌ ನಿರ್ಣಯಕ್ಕೆ ನಮ್ಮ ಬೆಂಬಲವಿಲ್ಲ ಎಂದು ನಗರದ ಕಿರಾಣಿ ವರ್ತಕರ ಸಂಘದ ಸದಸ್ಯರು ಗುರುವಾರ ತಹಶೀಲ್ದಾರ್‌ ಶಂಕರ್‌ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಗಂಗಾಧರ ಮಳಗಿ, ನಗರಸಭಾ ಸದಸ್ಯ ಗಿರೀಶ ತುಪ್ಪದ ಇದ್ದಾರೆ    

ಹಾವೇರಿ: ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ನಗರದಲ್ಲಿಜುಲೈ 16ರಿಂದ ಕೈಗೊಂಡಿದ್ದ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಸಂತೆ ಸೇರಿದಂತೆ ವಾಣಿಜ್ಯ ವಹಿವಾಟು ನಿರಾತಂಕವಾಗಿ ನಡೆದವು.

ಪ್ರತಿದಿನ ಬೆಳಿಗ್ಗೆ 5ರಿಂದ ಮಧ್ಯಾಹ್ನ 2ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಿ, ನಂತರ ಸ್ವಯಂಪ್ರೇರಣೆಯಿಂದ ಬಂದ್ ಮಾಡಲು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆ ಸೇರಿ ನಿರ್ಣಯ ಕೈಗೊಂಡಿದ್ದರು. ಆದರೆ, ಈ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ ಕಿರಾಣಿ ವರ್ತಕರ ಸಂಘದ ಪದಾಧಿಕಾರಿಗಳು ಶಾಸಕ ನೆಹರು ಓಲೇಕಾರ ಮತ್ತು ತಹಶೀಲ್ದಾರ್‌ ಶಂಕರ್‌ ಅವರಿಗೆ ಮನವಿ ಸಲ್ಲಿಸಿದರು.

ಲಾಕ್‍ಡೌನ್‍ಗೆ ನಮ್ಮ ವಿರೋಧವಿಲ್ಲ. ಆದರೆ, ಸ್ವಯಂಪ್ರೇರಿತ ಬಂದ್ ನಿರ್ಣಯ ಏಕಪಕ್ಷೀಯವಾಗಿದೆ. ನಗರದ ಎಲ್ಲ ಸಂಘ-ಸಂಸ್ಥೆಗಳಸದಸ್ಯರ ಸಭೆ ಕರೆದು ಈ ತೀರ್ಮಾನ ಕೈಗೊಳ್ಳಬೇಕು ಎಂಬುದು ಕಿರಾಣಿ ವ್ಯಾಪಾರಿಗಳ ಒತ್ತಾಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.