ಕುಮಾರಪಟ್ಟಣ: ಶುದ್ಧ ಕುಡಿಯುವ ನೀರು ಆರೋಗ್ಯಕ್ಕೆ ಎಷ್ಟು ಅಮೂಲ್ಯವೋ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಅಷ್ಟೇ ಮಹತ್ವವಾದದ್ದು ಎಂದು ಕೊಡಿಯಾಲ ಸೆಕ್ಟರ್ ಅಧಿಕಾರಿ ಪ್ರಸಾದ್ ಆಲದಕಟ್ಟಿ ತಿಳಿಸಿದರು.
ಕೊಡಿಯಾಲ ಗ್ರಾಮ ಪಂಚಾಯ್ತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಿಯಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಗ್ರಾಮ ಪಂಚಾಯ್ತಿ ಕಚೇರಿ ಹಾಗೂ ನಲವಾಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮತದಾನ ಜಾಗೃತಿ ಜಾಥಾ ನಡೆಯಿತು. ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪಿಡಿಒ ದೇವರಾಜ್ ಜಿ. ಪ್ರತಿಜ್ಞಾ ವಿಧಿ ಬೋಧಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಕನೂರು ವಲಯಾಧಿಕಾರಿ ತ್ರಿವೇಣಿ ಇಟಗಿ, ಮುಖ್ಯ ಶಿಕ್ಷಕ ಗದಿಗೆಪ್ಪ ಓಲೇಕಾರ, ಶಾರದಾ ಚಲವಾದಿ, ಬಿಎಲ್ಒ ಶಿವಯ್ಯ ಹಿರೇಮಠ, ಬಿ.ಎಸ್.ಆರೇರ, ಸುಜಾತ ಎಚ್., ದೇವರಾಜ್ ಮಲ್ಲಾಪುರ, ಅಶೋಕ್ ಬಿ.ಕೆ., ವಿ.ಮಾರುತೇಶ, ರೇಖಾ ಸಿ., ಚಂದ್ರಕಲಾ ಪುರವಂತರ, ನೂರ್ ಜಹಾನ್ ಎಂ.ಆರ್., ಅಣ್ಣಪ್ಪ ಚೆನ್ನಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.