ADVERTISEMENT

ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 16:19 IST
Last Updated 10 ಜನವರಿ 2024, 16:19 IST
2ಎ ಮಿಸಲಾಯಿತಿ ಹೋರಾಟ ಹಿನ್ನಲೆಯಲ್ಲಿ ಸವಣೂರು ಪಟ್ಟಣದ ಶುಕ್ರವಾರ ಪೇಟೆಯ ಶ್ರೀವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಪದಾಧಿಕಾರಿಗಳು ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಕೂಡಲಸಂಗಮದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.
2ಎ ಮಿಸಲಾಯಿತಿ ಹೋರಾಟ ಹಿನ್ನಲೆಯಲ್ಲಿ ಸವಣೂರು ಪಟ್ಟಣದ ಶುಕ್ರವಾರ ಪೇಟೆಯ ಶ್ರೀವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಪದಾಧಿಕಾರಿಗಳು ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಕೂಡಲಸಂಗಮದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.   

ಸವಣೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಗ್ರಹಿಸಲಾಗಿತ್ತು. ಅವರು ಸಮಯಾವಕಾಶ ನೀಡಿ ಎಂದಿದ್ದರು, ಅವರಿಗೆ ನೀಡಿದ ಸಮಯ ಈಗ ಮೀರಿದ್ದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಅವರು ಜ.12ರಂದು ಮೋಟೆ ಬೆನ್ನೂರಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಮೀಸಲಾತಿಗೆ ಒತ್ತಾಯಿಸಿ ಬೆಳಿಗ್ಗೆ 10ಕ್ಕೆ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಭೇಟಿ ನೀಡಿ ಪೇಟೆ ವೀರಭದ್ರೇಶ್ವರ ಸ್ವಾಮೀಜಿ ದೇವಸ್ಥಾನದಲ್ಲಿ ನಡೆದ ಪಂಚಮಸಾಲಿ ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ ಸಲುವಾಗಿ 2ಎ ಮಿಸಲಾಯಿತಿ ಬೇಡಿಕೆಗಾಗಿ ಕಳೆದ ಮೂರು ವರ್ಷಗಳಿಂದ ಬಹಳ ದೊಡ್ಡ ಹೋರಾಟ ಕೈಗೊಳ್ಳಲಾಗುತ್ತಿದೆ. ಹಿಂದಿನ ಸರ್ಕಾರ 2ಡಿ ಮಿಸಲಾತಿ ನೀಡಿತ್ತು. ಆದರೆ, ನೀತಿ ಸಂಹಿತೆಯ ಹಿನ್ನಲೆಯಲ್ಲಿ ಅನುಷ್ಠಾನಗೊಳ್ಳಲಿಲ್ಲ. ಸಿದ್ದರಾಮಯ್ಯನವರ ಸರ್ಕಾರಕ್ಕೆ ಎರಡು ಬಾರಿ ಮಾತುಕತೆ ಕೈಗೊಳ್ಳಲಾಯಿತು. ಕಾನೂನು ತಜ್ಞರೊಂದಿಗೆ ಚರ್ಚಿಸಲು ಪಡೆದ ಕಾಲಾವಕಾಶ ಮೀರಿದ ಹಿನ್ನಲೆಯಲ್ಲಿ ಹೆದ್ದಾರಿ ತಡೆದು ಇಷ್ಠಲಿಂಗಪೂಜೆಯೊಂದಿಗೆ ಹೋರಾಟ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.

ADVERTISEMENT

ಸಮಾಜದ ತಾಲೂಕು ಘಟಕದ ಅಧ್ಯಕ್ಷ ಬಿ.ಎಂ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಮಸಾಲಿ, ಗೌಡ, ಮಲೆಗೌಡ, ದೀಕ್ಷಾ ಲಿಂಗಾಯತರಿಗೆ 2ಎ ಮಿಸಲಾತಿ ಅನುಷ್ಠಾನಕ್ಕೆ ಹಾಗೂ ಲಿಂಗಾಯತ ಉಪಸಮಾಜಗಳಿಗೆ ಒಬಿಸಿ ಮಿಸಲಾಯಿತಿಯನ್ನು ಕೂಡಲೇ ಕೇಂದ್ರ ಸರ್ಕಾಕ್ಕೆ ಶಿಪಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ಬಿ.ಎಂ.ಇಂಗಳಗಿ, ಕರಿಯಪ್ಪ ಶಿವಬಸಣ್ಣವರ, ತಿಪ್ಪಣ್ಣ ಸುಬ್ಬಣ್ಣವರ, ರವತಪ್ಪ ಬಿಕ್ಕಣ್ಣನವರ, ಗುರುಪಾದಪ್ಪ ಶಿಗ್ಗಾಂವಿ, ಗಿರೀಶ ಮಟಿಗಾರ, ಸೋಮನಗೌಡ ಅರಳಿಹಳ್ಳಿ, ಗುರುಶಾಂತಪ್ಪ ಕುರವತ್ತಿ, ಮಲ್ಲೇಶ ನೀರಲಗಿ, ಶಂಕ್ರಪ್ಪ ಕುಲಕಣರ್ಿ, ಪರವತಗೌಡ ಪಾಟೀಲ, ರಾಜೇಶ್ವರಿ ಬುಶೆಟ್ಟಿ, ಪುಷ್ಪಾ ಬತ್ತಿ, ರೇಖಾ ಮುದಗಲ್, ಕವಿತಾ ಬಿಕ್ಕಣ್ಣನವರ, ಪುಷ್ಪಾ ಮುದಗಲ್, ವೀಣಾ ಮುದಗಲ್, ಸುಮಾ ಮುದಗಲ್, ಅನಸೂಯಾ ತೆಲಗಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.