ADVERTISEMENT

ರೌಡಿಶೀಟರ್‌ಗಳ ಪರೆಡ್‌

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 16:13 IST
Last Updated 19 ಡಿಸೆಂಬರ್ 2020, 16:13 IST
ಹಾವೇರಿ ಶಹರ ಪೊಲೀಸ್‌ ಠಾಣೆಯಲ್ಲಿ ಶನಿವಾರ ರೌಡಿಗಳ ಪರೆಡ್‌ ನಡೆಸಲಾಯಿತು 
ಹಾವೇರಿ ಶಹರ ಪೊಲೀಸ್‌ ಠಾಣೆಯಲ್ಲಿ ಶನಿವಾರ ರೌಡಿಗಳ ಪರೆಡ್‌ ನಡೆಸಲಾಯಿತು    

ಹಾವೇರಿ: ನಗರದ ಶಹರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್‌ಗಳ ಪರೆಡ್‌ ನಡೆಸಲಾಯಿತು.

ಡಿವೈಎಸ್ಪಿ ವಿಜಯಕುಮಾರ ಎಂ. ಸಂತೋಷ ಹಾಗೂ ಶಹರ ಠಾಣೆಯ ಸಿಪಿಐ ಪ್ರಲ್ಹಾದ ಚನ್ನಗಿರಿ ನೇತೃತ್ವದಲ್ಲಿ ಶಹರ ಠಾಣೆಯ ಸಿಬ್ಬಂದಿ ರೌಡಿಗಳ ಪಟ್ಟಿಯಲ್ಲಿದ್ದವರನ್ನು ಠಾಣೆಗೆ ಕರೆತಂದು ಪರೆಡ್‌ ನಡೆಸಿದರು.

ಡಿವೈಎಸ್ಪಿ ವಿಜಯಕುಮಾರ ಸಂತೋಷ ಅವರು ‘ಪ್ರತಿಯೊಬ್ಬ ರೌಡಿಗಳ ಮುಂದೆ ಮುಖಾಮುಖಿ ನಿಂತು, ಅವರಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇನ್ನು ಮುಂದೆ ಯಾವುದೇ ರೀತಿಯ ಕ್ರಿಮಿನಲ್ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿ ಬರದಂತೆ ಎಚ್ಚರಿಕೆಯಿಂದ ಉತ್ತಮ ಜೀವನ ನಡೆಸಿ ಎಂದು ಕಟ್ಟುನಿಟ್ಟಾಗಿ ತಿಳಿಸಿದರು.

ADVERTISEMENT

ಶಹರ ಠಾಣೆಯ ಸಿಪಿಐ ಪ್ರಲ್ಹಾದ ಚನ್ನಗಿರಿ ಮಾತನಾಡಿ, ಹಾವೇರಿ ಶಹರ ಸೇರಿದಂತೆ ಸುತ್ತಮುತ್ತಲಿನ ಸುಮಾರು 50ಕ್ಕೂ ಅಧಿಕ ಗೂಂಡಾಗಳ ಪರೇಡ್ ನಡೆಸಲಾಗಿದ್ದು, ಅವರಿಗೆ ಎಚ್ಚರಿಕೆಯನ್ನು ಡಿವೈಎಸ್ಪಿ ನೀಡಿದ್ದಾರೆ. ಶಹರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈ ಪರೇಡ್ ನಡೆಸಲಾಗಿದೆ ಎಂದರು.‌

ಶಹರ ಠಾಣೆಯ ಪಿಎಸ್ಐ ನಂದಿ, ಕ್ರೈಂ ವಿಭಾಗದ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.