ADVERTISEMENT

ಶಿಕ್ಷಕರ ವರ್ಗಾವಣೆಗೆ ವಿರೋಧ:ಶಾಲೆಗೆ ಬೀಗ ಜಡಿದು ಪ್ರತಿಭಟನೆ

ಕುಮಾರಪಟ್ಟಣ:

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:19 IST
Last Updated 4 ಡಿಸೆಂಬರ್ 2021, 2:19 IST
ಕುಮಾರಪಟ್ಟಣ ಸಮೀಪದ ನದಿಹರಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಶುಕ್ರವಾರ ಶಿಕ್ಷಕರ ವರ್ಗಾವಣೆ ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಮಕ್ಕಳು ಮತ್ತು ಪಾಲಕರೊಂದಿಗೆ ಬಿಇಒ ಗುರುಪ್ರಸಾದ್‌ ಜೆ.ಎನ್‌ ಸಂಧಾನ ನಡೆಸಿದರು
ಕುಮಾರಪಟ್ಟಣ ಸಮೀಪದ ನದಿಹರಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಶುಕ್ರವಾರ ಶಿಕ್ಷಕರ ವರ್ಗಾವಣೆ ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಮಕ್ಕಳು ಮತ್ತು ಪಾಲಕರೊಂದಿಗೆ ಬಿಇಒ ಗುರುಪ್ರಸಾದ್‌ ಜೆ.ಎನ್‌ ಸಂಧಾನ ನಡೆಸಿದರು   

ಕುಮಾರಪಟ್ಟಣ: ಸಮೀಪದ ನದಿಹರಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ರವಿ ಪಾಟೀಲ ಹಾಗೂ ಮಹಾಂತೇಶ್‌ ಸೋಮಣ್ಣವರ ಅವರ ವರ್ಗಾವಣೆ ರದ್ದುಪಡಿಸಿ ಎಂದು ಒತ್ತಾಯಿಸಿ ಮಕ್ಕಳು ಹಾಗೂ ಪೋಷಕರು ಶುಕ್ರವಾರ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಬಿಇಒ ಗುರುಪ್ರಸಾದ್‌ ಜೆ.ಎನ್‌. ಪ್ರತಿಭಟನಾ ಸ್ಥಳಕ್ಕೆ ಧಾವಿಸಿ, ಪ್ರತಿಭಟನಾ ನಿರತ ಮಕ್ಕಳು ಹಾಗೂ ಪಾಲಕರ ಬಳಿ ತೆರಳಿ, ಶಿಕ್ಷಕರು ಪರಸ್ಪರ ವರ್ಗಾವಣೆ ಬಯಸಿದ್ದಾರೆ. ಇದರಲ್ಲಿ ಇಲಾಖೆಯ ಪಾತ್ರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಪಾಲಕರು ಹಾಗೂ ಗ್ರಾಮದ ಮುಖಂಡರ ಜೊತೆ ಚರ್ಚಿಸಿ ಮತ್ತೊಮ್ಮೆ ಇಲಾಖೆಗೆ ತಮ್ಮ ಬೇಡಿಕೆ ಸಲ್ಲಿಸಿದ ನಂತರ ಉಪ ನಿರ್ದೇಶಕರ ಗಮನಕ್ಕೆ ತರುತ್ತೇನೆ. ಬಳಿಕ ಅವರು ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಪ್ರತಿಭಟನಾ ನಿರತ ಮಕ್ಕಳು ಹಾಗೂ ಪಾಲಕರ ಮನವೊಲಿಸುವಲ್ಲಿ ಯಶಸ್ವಿಯಾದರು.

ADVERTISEMENT

ಇಸಿಒ ಚಂದ್ರು ದೇವಾಂಗದ, ಎಸ್‌ಡಿಎಂಸಿ ಅಧ್ಯಕ್ಷ ಬಸನಗೌಡ ಚನ್ನಗೌಡ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.