ADVERTISEMENT

ವರದಾ, ಧರ್ಮಾ ನದಿಗಳಿಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 14:18 IST
Last Updated 4 ಆಗಸ್ಟ್ 2023, 14:18 IST
ವರದಾ ಮತ್ತು ಧರ್ಮಾ ನದಿಗಳ ಸಂಗಮ ಕ್ಷೇತ್ರ ಕೂಡಲ ಗ್ರಾಮದಲ್ಲಿ ವಿಶೇಷ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಲಾಯಿತು
ವರದಾ ಮತ್ತು ಧರ್ಮಾ ನದಿಗಳ ಸಂಗಮ ಕ್ಷೇತ್ರ ಕೂಡಲ ಗ್ರಾಮದಲ್ಲಿ ವಿಶೇಷ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಲಾಯಿತು   

ಅಕ್ಕಿಆಲೂರ: ವರದಾ ಮತ್ತು ಧರ್ಮಾ ನದಿಗಳ ಸಂಗಮ ಕ್ಷೇತ್ರ ಹಾನಗಲ್ ತಾಲ್ಲೂಕಿನ ಕೂಡಲ ಗ್ರಾಮದಲ್ಲಿ ಶುಕ್ರವಾರ ವಿಶೇಷ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ ಮಾತನಾಡಿ, ವರದಾ ಮತ್ತು ಧರ್ಮಾ ನದಿಗಳು ಹಾನಗಲ್ ತಾಲ್ಲೂಕಿನ ಜೀವನಾಡಿ. ಈ ವರ್ಷ ಉತ್ತಮ ಮಳೆ ಸುರಿದು ಎರಡೂ ನದಿಗಳು ಮೈದುಂಬಿ ಹರಿಯುತ್ತಿದ್ದು, ರೈತ ಸಮೂಹದಲ್ಲಿ ಹರ್ಷ ತರಿಸಿವೆ. ಪ್ರತಿವರ್ಷದ ಪದ್ಧತಿಯಂತೆ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಲಾಗುತ್ತಿದೆ ಎಂದರು.

ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಕುಂದಗೋಳದ ಕಲ್ಮಠದ ಬಸವಣ್ಣಜ್ಜ ಸಾನ್ನಿಧ್ಯ ವಹಿಸಿದ್ದರು. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ತಹಶೀಲ್ದಾರ್ ರವಿ ಕೊರವರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ, ರಾಜಶೇಖರ ಸಂಕಣ್ಣನವರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.