ADVERTISEMENT

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಕಾರಿಗ ಅಡ್ಡ ಕುಳಿತು ಆಕ್ರೋಶ

ಪೊಲೀಸ್ ಕಾನ್‌ಸ್ಟೆಬಲ್‌ ನೇಮಕಾತಿ: ವಯೋಮಿತಿ ಹೆಚ್ಚಳಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 16:54 IST
Last Updated 15 ಅಕ್ಟೋಬರ್ 2022, 16:54 IST
   

ಹಾವೇರಿ: ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ತಾನ ರಾಜ್ಯಗಳಲ್ಲಿ ಇರುವಂತೆ ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ ವಯೋಮಿತಿಯನ್ನು ಕರ್ನಾಟಕದಲ್ಲೂ ಗರಿಷ್ಠ 38 ವರ್ಷಗಳವರೆಗೆ ಹೆಚ್ಚಿಸಬೇಕು ಎಂದು ಕಾನ್‌ಸ್ಟೆಬಲ್ ಹುದ್ದೆ ಆಕಾಂಕ್ಷಿಗಳು ಆಗ್ರಹಿಸಿದರು.

ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಜಿಲ್ಲಾ ಕೋರ್‌ ಕಮಿಟಿ ಸಭೆ ಮುಗಿಸಿ ಹುಬ್ಬಳ್ಳಿಯತ್ತ ಹೊರಟ್ಟಿದ್ದ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ಕಾರಿಗೆ ಅಡ್ಡ ಕುಳಿತು ಪ್ರತಿಭಟನೆ ನಡೆಸಿದರು.

ಕೃಷಿ ಸಚಿವ ಬಿ‌.ಸಿ‌. ಪಾಟೀಲ ಹಾಗೂ ಬಿಜೆಪಿ ಶಾಸಕರು ಬಂದು ಸಮಾಧಾನ ಹೇಳಿದರೂ ಕಾರಿನ ಮುಂಭಾಗದಿಂದ ಆಕಾಂಕ್ಷಿಗಳು ಹೇಳಲಿಲ್ಲ. ಕಾರಿನಿಂದ ಇಳಿದು ಬಂದ ಅರುಣ್‌ಸಿಂಗ್‌ ಆಕಾಂಕ್ಷಿಗಳ ಸಮಸ್ಯೆಗಳನ್ನು ಆಲಿಸಿದರು.

ADVERTISEMENT

ಮನವಿ ಸ್ವೀಕರಿಸಿದ ನಂತರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿ, ಹುಬ್ಬಳ್ಳಿಯತ್ತ ಅರುಣ್‌ ಸಿಂಗ್‌ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.