ADVERTISEMENT

ರಾಣೆಬೆನ್ನೂರು: ವರ್ತಕರ ಪ್ರತಿಭಟನೆ 6ನೇ ದಿನಕ್ಕೆ

ಬೆಂಬಲ ಸೂಚಿಸಿದ ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 16:18 IST
Last Updated 3 ಫೆಬ್ರುವರಿ 2024, 16:18 IST
ರಾಣೆಬೆನ್ನೂರು ತಾಲ್ಲೂಕಿನ ಹುಲಿಹಳ್ಳಿ- ಕುನಬೇವು ಗ್ರಾಮದ ಎಪಿಎಂಸಿ ಉಪಪ್ರಾಂಗಣದಲ್ಲಿನ ನಿವೇಶನ ಹಂಚಿಕೆ ಹಿನ್ನೆಲೆ ಪ್ರತಿಭಟನೆ ಕೈಗೊಂಡಿದ್ದ ವರ್ತಕರಿಗೆ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಹಾಗೂ ಸದಸ್ಯರು ಪ್ರತಿಭಟನಾ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದರು
ರಾಣೆಬೆನ್ನೂರು ತಾಲ್ಲೂಕಿನ ಹುಲಿಹಳ್ಳಿ- ಕುನಬೇವು ಗ್ರಾಮದ ಎಪಿಎಂಸಿ ಉಪಪ್ರಾಂಗಣದಲ್ಲಿನ ನಿವೇಶನ ಹಂಚಿಕೆ ಹಿನ್ನೆಲೆ ಪ್ರತಿಭಟನೆ ಕೈಗೊಂಡಿದ್ದ ವರ್ತಕರಿಗೆ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಹಾಗೂ ಸದಸ್ಯರು ಪ್ರತಿಭಟನಾ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದರು   

ರಾಣೆಬೆನ್ನೂರು: ತಾಲ್ಲೂಕಿನ ಹುಲಿಹಳ್ಳಿ- ಕುನಬೇವು ಗ್ರಾಮದ ಮೆಗಾ ಮಾರುಕಟ್ಟೆಯ ಎಪಿಎಂಸಿ ಉಪಪ್ರಾಂಗಣದಲ್ಲಿನ ನಿವೇಶನ ಹಂಚಿಕೆ ಹಾಗೂ ವರ್ತಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವರ್ತಕರು ನಡೆಸಿರುವ ಪ್ರತಿಭಟನೆ ಶನಿವಾರ 6ನೇ ದಿನಕ್ಕೆ ಕಾಲಿಟ್ಟಿದೆ.

ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ವಾಪಸ್ಸು ಪಡೆಯುದಿಲ್ಲ ಎಂದು ವರ್ತಕರು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಹಾಗೂ ಸದಸ್ಯರು ಪ್ರತಿಭಟನಾ ಸ್ಥಳಕ್ಕೆ ಶನಿವಾರ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.

ADVERTISEMENT

ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಸಿದ್ದರಾಮಯ್ಯ ಸಂಶಿಮಠ ಅವರು ಮಾತನಾಡಿ, ‘ಮೇಗಾ ಮಾರುಕಟ್ಟೆಯ ನಿವೇಶನ ಹಂಚಿಕೆಯನ್ನು ವಿರೋಧಿಸಿ ರಾಣೆಬೆನ್ನೂರಿನ ವರ್ತಕರು ಹಮ್ಮಿಕೊಂಡಿರುವ ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಬೆಂಗಳೂರಿಗೆ ನಮ್ಮ ಸಂಸ್ಥೆಯಿಂದ ವರ್ತಕರ ನಿಯೋಗ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ವರ್ತಕರ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ’ ಎಂದು ಭರವಸೆ ನೀಡಿದರು.

ಕಾರ್ಯದರ್ಶಿ ರವೀಂದ್ರ ಬಳಗಾರ, ಉಪಾಧ್ಯಕ್ಷ ವಿರೇಶ ಮೋಟಗಿ, ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ವಿ.ಪಿ.ಲಿಂಗನಗೌಡ್ರ, ಸಿದ್ದಣ್ಣ ಅತಡಕರ, ಮಾಲತೇಶ ಕಜ್ಜರಿ, ಗುರುಪ್ರಕಾಶ ಜಂಬಿಗಿ, ಎಂ.ಎಸ್. ಅರಳಿ, ಉಮೇಶ್ ಪಟ್ಟಣಶೆಟ್ಟಿ, ನಾಗರಾಜ ಮೋಟಗಿ, ಮಂಜುನಾಥ ಪಿ.ಆರ್.‌ ಮಾಲತೇಶ ಕರೇಚಿಕ್ಕಪ್ಪನವರ, ವರ್ಜಿಬಾಯ್ ಪಟೇಲ್, ಉಮೇಶ್ ಹೊನ್ನಾಳಿ, ಕೊಟ್ರೇಶ್ ರಾಮಳದ, ಶಿವಕುಮಾರ್ ಬಣಕಾರ, ವೀರನಗೌಡ ಚನಗೌಡರ, ರಾಜಶೇಖರ್ ಹದಿಮನಿ, ಬಸವರಾಜ ಕಂಬಳಿ, ರಾಜು ಗೋಂದಕರ, ಪರಶುರಾಮ ಮಾಳೋದೆ, ಕುಮಾರ್ ಜಂಬಿಗಿ, ಶಿವಣ್ಣ ಸುಣಗಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.