ADVERTISEMENT

ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಹಾವೇರಿ ವಿದ್ಯಾರ್ಥಿನಿಗೆ ಮೂರನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 9:44 IST
Last Updated 8 ಏಪ್ರಿಲ್ 2025, 9:44 IST
<div class="paragraphs"><p>ಕ್ಷಮಾ ಸಿ.ಪಿ</p></div>

ಕ್ಷಮಾ ಸಿ.ಪಿ

   

ಹಾವೇರಿ: ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾವೇರಿ ಜಿಲ್ಲೆಯ ವಿದ್ಯಾರ್ಥಿನಿ ಕ್ಷಮಾ ಸಿ.ಪಿ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಖನ್ನೂರು ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿನಿ ಕ್ಷಮಾ ಅವರು 597 (ಶೇ. 95.50) ಅಂಕಗಳನ್ನು ಪಡೆದುಕೊಂಡಿದ್ದಾರೆ.

ADVERTISEMENT

ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುವ ಕ್ಷಮಾ, ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಕ್ಷಮಾ ಅವರು ಭೌತ ವಿಜ್ಞಾನದಲ್ಲಿ 100, ರಸಾಯನ ವಿಜ್ಞಾನ-100, ಗಣಿತ-100, ಜೀವ ವಿಜ್ಞಾನ- 100, ಕನ್ನಡ-100 ಹಾಗೂ ಇಂಗ್ಲಿಷ್‌ನಲ್ಲಿ 97 ಅಂಕ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.