ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದಲ್ಲಿ ಗುರುವಾರ ನಿರಂತರ ಮಳೆಯಿಂದಾಗಿ ಬೀರಪ್ಪ ನಾಗಪ್ಪ ಹೊಟ್ಟಿಭರಮಣ್ಣನವರ ಮನೆ ನೆಲಸಮವಾಗಿರುವುದು
ರಟ್ಟೀಹಳ್ಳಿ: ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಗುರುವಾರ ತಾಲ್ಲೂಕಿನಲ್ಲಿ ಒಟ್ಟು ಎಂಟು ಮನೆಗಳು ಬಿದ್ದಿವೆ.
ತಾಲ್ಲೂಕಿನಲ್ಲಿ ಮಕರಿ ಗ್ರಾಮದಲ್ಲಿ ಎರಡು, ಹುಲ್ಲತ್ತಿ ಗ್ರಾಮದಲ್ಲಿ ಎರಡು, ಕುಂಚೂರು ಗ್ರಾಮದಲ್ಲಿ ಎರಡು ಮನೆಗಳು, ಹಾಗೂ ಮಾಸೂರು ಮತ್ತು ಕುಡುಪಲಿ ಗ್ರಾಮದಲ್ಲಿ ತಲಾ ಒಂದು ಮನೆ ಮಳೆಯಿಂದಾಗಿ ಬಿದ್ದಿವೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ, ಪಿಡಿಒ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.