ಹುಬ್ಬಳ್ಳಿ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಯು.ರಾಜಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಿನ ಹಳ್ಳ ಕ್ಯಾಂಪ್‌ನ ಕುರಿಗಾಹಿ ಲಕ್ಷ್ಮಣ (21) ಮಂಗಳವಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ವಿಜಯನಗರ ಜಿಲ್ಲೆಯ ಗುಡೇಕೋಟೆ ಹೋಬಳಿಯಲ್ಲಿ ಬಿರುಗಾಳಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಿದ್ದು ಚಂದ್ರಶೇಖರಪುರದಲ್ಲಿ ಈರಣ್ಣ ಎಂಬುವರ ರೇಷ್ಮೆ ಮನೆ ಸುಟ್ಟಿದೆ. ಪಪ್ಪಾಯ ಬೆಳೆ ನಾಶವಾಗಿದೆ.
ಹಾವೇರಿ ಜಿಲ್ಲೆ ಹಲವು ಕಡೆ ಜೋರು ಗಾಳಿ ಜೊತೆಗೆ ಆಲಿಕಲ್ಲು ಮಳೆಯಾಗಿದೆ. ಹಾವೇರಿ ತಾಲ್ಲೂಕಿನ ಕಳ್ಳಿಹಾಳ ಗ್ರಾಮದ ಮನೆಯೊಂದರ ತಗಡುಗಳು ಹಾರಿ ಹೋಗಿವೆ. ಸಿಡಿಲು–ಗುಡುಗಿನ ಆರ್ಭಟವೂ ಹೆಚ್ಚಾಗಿತ್ತು. ಅಲ್ಲಲ್ಲಿ ಗಿಡಮರಗಳು ಉರುಳಿಬಿದ್ದವು.
40 ಮೇಕೆ ಸಾವು (ಶಿವಮೊಗ್ಗ ವರದಿ): ತಾಲ್ಲೂಕಿನ ಬಾಳೆಕೊಪ್ಪ ಗ್ರಾಮದ ಬಳಿ ಮಂಗಳವಾರ ಸಂಜೆ ಭಾರಿ ಮಳೆ ಸುರಿದ ಸಂದರ್ಭ ಸಿಡಿಲು ಬಡಿದು 40 ಮೇಕೆ ಹಾಗೂ ಎರಡು ನಾಯಿ ಮರಿಗಳು ಮೃತಪಟ್ಟಿವೆ.
ಮೇಕೆ ಕಾಯುತ್ತಿದ್ದ ಬಾಳೆಕೊಪ್ಪ ನಿವಾಸಿ ಹುಚ್ಚಪ್ಪ (58) ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.