
ರಾಣೆಬೆನ್ನೂರು: ನಾವು ಸತ್ತ ನಂತರ ನಮ್ಮ ಕಣ್ಣುಗಳನ್ನು ಹೂಳುವ ಅಥವಾ ಸುಡುವ ಬದಲು ಮತ್ತೊಬ್ಬ ಅಂಧನಿಗೆ ಬೆಳಕಾಗುವಂತೆ ನೇತ್ರದಾನದ ಬಗ್ಗೆ ಈ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವ ಉದ್ದೇಶ ಎಂದು ವರ್ತಕ ಜಿ.ಜಿ. ಹೊಟ್ಟಿಗೌಡ್ರ ಹೇಳಿದರು.
ಇಲ್ಲಿನ ಶ್ರೀರಾಮನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ ಹಾಗೂ ನಗರದ ವಿವಿಧ ಸಂಘಟನೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನಗರದಲ್ಲಿ ಶನಿವಾರ ತೃತೀಯ ಮೆಗಾ ವಾಕಥಾನ್ ( ಕಣ್ಣಿಗೆ ಬಟ್ಟೆ ಕಟ್ಟಿ ನಡೆಯುವ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾಗೃತಿ ಜಾಥಾ ನಗರ ಸಭೆ ಕ್ರೀಡಾಂಗಣದಿಂದ ಆರಂಭವಾಗಿ ಹಳೇ ಪಿ.ಬಿ.ರಸ್ತೆ ಮೂಲಕ ಕುರುಬಗೇರಿ ವೃತ್ತ, ದುರ್ಗಾ ವೃತ್ತ, ಟಾಂಗಾಕೂಟ, ಎಂ.ಜಿ.ರಸ್ತೆ, ಅಂಚೆ ಕಚೇರಿ ವೃತ್ತ, ಬಸ್ ನಿಲ್ದಾಣ ವೃತ್ತದ ಮೂಲಕ ಮೃತ್ಯುಂಜನಗರದ ಮೂಲಕ ಶ್ರೀರಾಮನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ ಬಳಿ ಸಂಪನ್ನಗೊಂಡಿತು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಸಂಸ್ಥೆಯ ಧರ್ಮದರ್ಶಿ ಕೆ.ಜಿ.ಮೋಹನ್, ವರದರಾಜು, ವರ್ತಕ ಸಂಘದ ಅಧ್ಯಕ್ಷ ಎಸ್, ಸುಧೀರ ಕುರುವತ್ತಿ, ವಿಜಯಲಕ್ಷ್ಮೀ ಮುಂಡಾಸದ, ವಸಂತಾ ಹುಲ್ಲತ್ತಿ, ಭಾರತಿ ಜಂಬಗಿ, ಶಿವಪ್ರಸಾದ, ಸುರೇಶ ಸಿ.ಜಿ, ಕಿಶನ್ ಕುಮಾರ, ಮಲ್ಲೇಶಣ್ಣ ಅರಕೆರೆ, ಕೊಟ್ರೇಶ ಯಮ್ಮಿ, ಮಹೇಶ ನಾಡಿಗೇರ, ವೈದ್ಯರಾದ ಡಾ. ಗಿರೀಶ ಕೆಂಚಪ್ಪನವರ, ಡಾ.ನಾರಾಯಣ ಪವಾರ, ಡಾ. ಮೇಘನಾ ನಾಡಿಗೇರ, ಸಪ್ನಾ ಭತ್ತದ, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.