ರಾಣೆಬೆನ್ನೂರು: ತಾಲ್ಲೂಕಿನ ಮಾಕನೂರು ಗ್ರಾಮದ ಸಮೀಪದ ಲಾಟೇರ್ ಜಮೀನಿನ ಬಳಿ ಹೊಸದಾಗಿ ಕಟ್ಟುತ್ತಿರುವ ಮನೆಯಲ್ಲಿ ಜೂಜಾಟ ಆಡುತ್ತಿದ್ದ ವೇಳೆ ಕುಮಾರಪಟ್ಟಣ ಪೊಲೀಸರು ಸೋಮವಾರ ದಾಳಿ ನಡೆಸಿ, ₹1.74 ಲಕ್ಷ ನಗದು ಜಪ್ತಿ ಪಡಿಸಿಕೊಂಡಿದ್ದು, 18 ಜನ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಎಸ್‌ಪಿ ಲೊಕೇಶ ಜೆ ಹಾಗೂ ಸಿಪಿಐ ಪ್ರವೀಣಕುಮಾರ ಅವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಕುಮಾರಪಟ್ಟಣ ಪಿಎಸ್‌ಐ ಪ್ರವೀಣಕುಮಾರ ವಾಲೀಕಾರ ಹಾಗೂ ತಂಡದರು ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.