ADVERTISEMENT

ರಟ್ಟೀಹಳ್ಳಿ: ಭಗತಸಿಂಗ್ ಸರ್ಕಲ್ ವಾಹನ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:47 IST
Last Updated 2 ಜುಲೈ 2025, 15:47 IST
ರಟ್ಟೀಹಳ್ಳಿ ಪಟ್ಟಣದ ಭಗತಸಿಂಗ್ ವೃತ್ತದಲ್ಲಿ ವಿಪರೀತ ಸಂಚಾರ ದಟ್ಟಣೆಯಾಗುತ್ತಿದ್ದು, ವಿದ್ಯಾರ್ಥಿಗಳು, ಪಾದಚಾರಿಗಳು ಸಂಚರಿಸಲು ಪರದಾಡುತ್ತಿರುವುದು.
ರಟ್ಟೀಹಳ್ಳಿ ಪಟ್ಟಣದ ಭಗತಸಿಂಗ್ ವೃತ್ತದಲ್ಲಿ ವಿಪರೀತ ಸಂಚಾರ ದಟ್ಟಣೆಯಾಗುತ್ತಿದ್ದು, ವಿದ್ಯಾರ್ಥಿಗಳು, ಪಾದಚಾರಿಗಳು ಸಂಚರಿಸಲು ಪರದಾಡುತ್ತಿರುವುದು.   

ರಟ್ಟೀಹಳ್ಳಿ: ಪಟ್ಟಣದ ಭಗತಸಿಂಗ್ ಸರ್ಕಲ್ ಬಳಿ ಬೆಳಿಗ್ಗೆ ಮತ್ತು ಸಂಜೆ ಬಹಳಷ್ಟು ಸಂಚಾರ ದಟ್ಟಣೆಯಾಗುತ್ತಿದ್ದು, ನಿತ್ಯ ವಿದ್ಯಾರ್ಥಿಗಳು, ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೃತ್ತಕ್ಕೆ ಹೊಂದಿಕೊಂಡು ನೊಬೆಲ್ ಪಬ್ಲಿಕ್ ಶಾಲೆ, ಲಯನ್ಸ್ ಶಾಲೆ, ತರಳುಬಾಳು ಶಾಲೆ, ಸರ್ಕಾರಿ ಪಿ.ಯು. ಕಾಲೇಜು, ತಹಶೀಲ್ದಾರ್‌ ಕಚೇರಿ, ಕೃಷಿ ಇಲಾಖೆ, ನ್ಯಾಯಾಲಯ ಸಮೀಪವಿರುವುದರಿಂದ ಈ ವೃತ್ತದ ಮೂಲಕವೇ ವಿದ್ಯಾರ್ಥಿಗಳು ತೆರಳಬೇಕಾದ ಅನಿವಾರ್ಯತೆಯಿದೆ.

ಅಲ್ಲದೇ ನಿತ್ಯ ಶಾಲೆಗೆ ಮತ್ತು ಕಚೇರಿಗೆ ಬರುವ ವಿದ್ಯಾರ್ಥಿಗಳು ಕಚೇರಿ ಸಿಬ್ಬಂದಿ ಬಸ್ ಮೂಲಕ ಇಲ್ಲಿಂದಲೇ ಪ್ರಯಾಣ ಬೆಳೆಸಬೇಕು. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ನಿತ್ಯ ನೂರಾರು ವಾಹನಗಳು ಇಲ್ಲಿ ಸಂಚಿರಸುತ್ತವೆ. ಹೀಗಾಗಿ ಇಲ್ಲಿ ಹಲವಾರು ಬಾರಿ ವಾಹನಗಳು ಅಪಘಾತವಾಗಿವೆ ಸಾವು ನೋವುಗಳಾದ ಉದಾಹರಣೆಗಳಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಪೊಲೀಸ್ ಇಲಾಖೆಯವರು, ಈ ವೃತ್ತದಿಂದ ಸಂಚರಿಸುವ ವಿದ್ಯಾರ್ಥಿಗಳು, ಪಾದಚಾರಿಗಳ ಸುರಕ್ಷೆತೆ ದೃಷ್ಟಿಯಿಂದ ಇಲ್ಲಿ ಟ್ರಾಪಿಕ್ ಸಿಗ್ನಲ್ ಅಳವಡಿಸಬೇಕು. ಮತ್ತು ವಾಹನಗಳು ನಿಧಾನವಾಗಿ ಚಲಿಸುವ ಮಾರ್ಗಸೂಚಿಗಳನ್ನು ಅಳವಡಿಸಬೇಕು. ಹಾಗೂ ವೇಗವಾಗಿ ಸಂಚರಿಸುವ ವಾಹನ ಚಾಲಕರಿಗೆ ದಂಡ ವಿಧಿಸಬೇಕು. ಭಗತ್ ಸಿಂಗ್ ಸರ್ಕಲ್ ದಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು.

ಮಾಲತೇಶ ಬೆಳಕೇರಿ, ಹಾಗೂ ರಾಜು ವೇರ್ಣೇಕರ,ಪಟ್ಟಣದ ನಿವಾಸಿಗಳು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.