ADVERTISEMENT

ಮೆಣಸಿನಕಾಯಿ ಆವಕದಲ್ಲಿ ಮತ್ತೆ ಕುಸಿತ

​ಪ್ರಜಾವಾಣಿ ವಾರ್ತೆ
Published 15 ಮೇ 2025, 14:42 IST
Last Updated 15 ಮೇ 2025, 14:42 IST
<div class="paragraphs"><p>ಬ್ಯಾಡಗಿ ಮೆಣಸಿನಕಾಯಿ</p></div>

ಬ್ಯಾಡಗಿ ಮೆಣಸಿನಕಾಯಿ

   

ಬ್ಯಾಡಗಿ: ಇಲ್ಲಿಯ ಎಪಿಎಂಸಿ ಮಾರುಕಟ್ಟೆಗೆ ಗುರುವಾರ ಕೇವಲ 8,533 ಚೀಲ ( 2,133ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಕುಸಿತವಾಗಿದೆ.

ಮೆಣಸಿನಕಾಯಿ ಆವಕ ದಿನದಿಂದ ದಿನಕ್ಕೆ ಇಳಿಕೆಯತ್ತ ಸಾಗಿದೆ. ಕಳೆದ ಸೋಮವಾರ ಕೇವಲ 10,395 ಚೀಲ (2,598 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿತ್ತು. ಗುರುವಾರ ಮಾರುಕಟ್ಟೆಗೆ 882 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 142 ಲಾಟ್‌ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ.

ADVERTISEMENT

39 ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 20,699 ರಂತೆ, ಎರಡು ಚೀಲ ಕಡ್ಡಿ ಮೆಣಸಿನಕಾಯಿ ₹ 18,800ರಂತೆ ಹಾಗೂ ಗುಂಟೂರು ತಳಿ ಮೆಣಸಿನಕಾಯಿ ₹ 12,209ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ. ಆದರೆ ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ಕ್ವಿಂಟಲ್‌ಗೆ ₹ 1 ಸಾವಿರ ಇಳಿಕೆಯಾಗಿದೆ.

ಸರಾಸರಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ₹ 17,909, ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ₹ 16,009 ಹಾಗೂ ಗುಂಟೂರ ತಳಿ ₹ 10,809ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 162 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಗುರುವಾರದ ಮಾರುಕಟ್ಟೆ ದರ (ಪ್ರತಿ ಕ್ವಿಂಟಲ್‌ಗೆ)
ಕನಿಷ್ಠ– ಗರಿಷ್ಠ
ಬ್ಯಾಡಗಿ ಕಡ್ಡಿ ₹ 1,789- ₹ 18,800
ಬ್ಯಾಡಗಿ ಡಬ್ಬಿ ₹ 1,989- ₹ 20,699
ಗುಂಟೂರ ತಳಿ ₹ 789- ₹ 12,209

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.