ADVERTISEMENT

ರಾಣೆಬೆನ್ನೂರು: ಗಣರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 6:21 IST
Last Updated 27 ಜನವರಿ 2026, 6:21 IST
ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ಕೆನರಾ ಈ ವಿಶನ್‌ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳನ್ನು ಗಣರಾಜ್ಯೋತ್ಸವ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿಯಿಂದ ಸನ್ಮಾನಿಸಲಾಯಿತು  
ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ಕೆನರಾ ಈ ವಿಶನ್‌ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳನ್ನು ಗಣರಾಜ್ಯೋತ್ಸವ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿಯಿಂದ ಸನ್ಮಾನಿಸಲಾಯಿತು     

ರಾಣೆಬೆನ್ನೂರು: ತಾಲ್ಲೂಕಿನ ಚಳಗೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಆಚರಿಸಲಾಯಿತು.

ಪಿಡಿಒ ಶಹನಾಬಿ ಕಲಕೋಟಿ, ದೈಹಿಕ ಶಿಕ್ಷಣ ಶಿಕ್ಷಕರಾದ ಕಾಂತೇಶ ಮಾದಾಪುರ ಮತ್ತು ಚಂದ್ರು ಗ್ಯಾನಗೌಡರ ಅವರು ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಮುಖಂಡರಾದ ಸಣ್ಣ ತಮ್ಮಪ್ಪ ಬಾರ್ಕಿ, ಮಲ್ಲಿಕಾರ್ಜುನ ಕೆಂಚರಡ್ಡಿ, ಬುಡನ್ ಸಾಬ್ ದೊಡ್ಮನಿ, ವೆಂಕಪ್ಪ ಮಾದಾಪುರ, ಸಿದ್ದಲಿಂಗಪ್ಪ ಮರಿಲಿಂಗಣ್ಣನವರ, ಮೌಲಸಾಬ್ ಪ್ಲಾಟ, ದಿಳ್ಳೆಪ್ಪ ಕಟಗಿ, ವಿಶ್ವನಾಥ್ ಕರೆಗೌಡ, ಭರಮಗೌಡ ಕರೂರ, ರೇವಣ್ಣನವರ ಭಾಗವಹಿಸಿದ್ದರು.

ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್‌ ಪಂದ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ ಗ್ರಾಮದ ಕೆನರಾ ಈ ವಿಶನ್‌ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.