ADVERTISEMENT

ಶಶಿಧರಸ್ವಾಮಿಗೆ ಬಾಂಗ್ಲಾದೇಶದ ‘ಮಾಸ್ಟರ್ ಡಿಸ್ಟಿಂಕ್ಷನ್ ಗೌರವ’

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:19 IST
Last Updated 28 ಜುಲೈ 2024, 15:19 IST
ಪ್ರಶಸ್ತಿಗೆ ಆಯ್ಕೆಯಾದ, ಬ್ಯಾಡಗಿ ತಾಲ್ಲೂಕಿನ ಶಶಿಧರಸ್ವಾಮಿ ಹಿರೇಮಠ ಅವರು ಕ್ಲಿಕ್ಕಿಸಿದ ಮಿಲನ ಕ್ರಿಯೆಯಲ್ಲಿರುವ ಕಪ್ಪೆಗಳ ಛಾಯಾಚಿತ್ರ
ಪ್ರಶಸ್ತಿಗೆ ಆಯ್ಕೆಯಾದ, ಬ್ಯಾಡಗಿ ತಾಲ್ಲೂಕಿನ ಶಶಿಧರಸ್ವಾಮಿ ಹಿರೇಮಠ ಅವರು ಕ್ಲಿಕ್ಕಿಸಿದ ಮಿಲನ ಕ್ರಿಯೆಯಲ್ಲಿರುವ ಕಪ್ಪೆಗಳ ಛಾಯಾಚಿತ್ರ   

ಬ್ಯಾಡಗಿ: ತಾಲ್ಲೂಕಿನ ಕದರಮಂಡಲಗಿ ಗ್ರಾಮದ ಅಂತರರಾಷ್ಟ್ರೀಯ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಮತ್ತು ತಹಶೀಲ್ದಾರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಶಿಧರಸ್ವಾಮಿ ಹಿರೇಮಠ ಅವರಿಗೆ ಬಾಂಗ್ಲಾದೇಶದ ಅತ್ಯುನ್ನತ ಅಗೈಲ್ ಫೋಟೋಗ್ರಾಫಿಕ್ ಸೊಸೈಟಿಯ ‘ಮಾಸ್ಟರ್ ಡಿಸ್ಟಿಂಕ್ಷನ್ ಗೌರವ’ ಪ್ರಶಸ್ತಿ ಲಭಿಸಿದೆ.

ವಿಶ್ವದ 208 ಛಾಯಾಗ್ರಾಹಕರು ಡಿಸ್ಟಿಂಕ್ಷನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಲ್ಲಿ ಒಬ್ಬರಾಗಿರುವ ಶಶಿಧರ ಅವರ 100 ಛಾಯಾಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ ಎಂದು ಬಾಂಗ್ಲಾದೇಶದ ಅಗೈಲ್ ಫೋಟೋಗ್ರಾಫಿಕ್ ಸೊಸೈಟಿಯ ಅಧ್ಯಕ್ಷ ಸೊಹೆಲ್ ಪರ್ವೇಜ್ ಹಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಬ್ಯಾಡಗಿ ತಾಲ್ಲೂಕಿನ ಶಶಿಧರಸ್ವಾಮಿ ಹಿರೇಮಠ ಅವರು ಕ್ಲಿಕ್ಕಿಸಿದ ಮಿಲನ ಕ್ರಿಯೆಯಲ್ಲಿರುವ ಹಳದಿ ಚಿಟ್ಟೆಗಳ ಛಾಯಾಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT