ADVERTISEMENT

ಎಸ್‌ಸಿ ಮೋರ್ಚಾ: ಬ್ಯಾಹಟ್ಟಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 14:53 IST
Last Updated 1 ಸೆಪ್ಟೆಂಬರ್ 2020, 14:53 IST
ಹಾವೇರಿ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಎಸ್‌ಸಿ ಮೋರ್ಚಾ ಪದಾಧಿಕಾರಿಗಳಿಗೆ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಆಯ್ಕೆ ಪತ್ರ ವಿತರಿಸಿದರು 
ಹಾವೇರಿ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಎಸ್‌ಸಿ ಮೋರ್ಚಾ ಪದಾಧಿಕಾರಿಗಳಿಗೆ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಆಯ್ಕೆ ಪತ್ರ ವಿತರಿಸಿದರು    

ಹಾವೇರಿ: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರಜಿಲ್ಲಾ ಎಸ್‌.ಸಿ. ಮೋರ್ಚಾ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷರನ್ನಾಗಿ ಮಂಜುನಾಥ ಬ್ಯಾಹಟ್ಟಿ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಜಗದೀಶ ಮಲಗೋಡ, ನಿಂಗಪ್ಪ ಮರಿಗಪ್ಪನವರ, ಚಂದ್ರಪ್ಪ ಹರಿಜನ,ಸುರೇಶನಾಯ್ಕ ಲಮಾಣಿ,ಮಂಜಪ್ಪ ವಡ್ಡರ,ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಮಸಿಯಪ್ಪನವರ,ಶಿವಾನಂದ ಗೂರಪ್ಪನವನರ,ಕಾರ್ಯದರ್ಶಿಯಾಗಿ ಹನುಮಂತಪ್ಪ ನೋಕಾಪೂರ, ಪುಟ್ಟಪ್ಪ ಬ. ಚಲವಾದಿ,ನಾಗೇಶ ಆನವಟ್ಟಿ,ಖಜಾಂಚಿಯಾಗಿ ಚಂದ್ರಹಾಸ ಕ್ಯಾತಣ್ಣನವರ ಹಾಗೂ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.