ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಯಕಲಾಸಪುರ ಗ್ರಾಮದಲ್ಲಿ ಶುಕ್ರವಾರ ಅಪಘಾತ ಸಂಭವಿಸಿದ್ದು, ಬಾಲಕ ಲಿಂಗರಾಜು ಎಂಬಾತ ಗಾಯಗೊಂಡಿದ್ದಾನೆ.
‘ರಾಣೆಬೆನ್ನೂರಿನ ಕೆಂಬ್ರಿಡ್ಜ್ ಶಾಲೆಯ 18 ಮಕ್ಕಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಬಾಲಕ ಲಿಂಗಾಜು ಅವರಿಗೆ ತರಚಿದ ಗಾಯಗಳಾಗಿವೆ. ಉಳಿದ 17 ಮಕ್ಕಳಿಗೆ ಯಾವುದೇ ಗಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಮೆಡ್ಲೇರಿ ರಸ್ತೆಯಿಂದ ಯಕಲಾಸಪುರ ರಸ್ತೆಗೆ ಶಾಲಾ ಬಸ್ (ಕೆಎ 55 4354) ಹೊರಟಿತ್ತು. ಮಾರ್ಗ ಮಧ್ಯೆ ತಿಪ್ಪೆಗುಂಡಿಯಲ್ಲಿ ಚಕ್ರ ಸಿಲುಕಿದ್ದರಿಂದ, ಉರುಳಿಬಿದ್ದಿತ್ತು. ಚಾಲಕನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.