ADVERTISEMENT

ಶರಣ ಕೇತೇಶ್ವರ ಸ್ವಾಮಿಯ 895ನೇ ಜಯಂತ್ಯುತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 3:01 IST
Last Updated 6 ನವೆಂಬರ್ 2025, 3:01 IST
ರಾಣೆಬೆನ್ನೂರಿನಲ್ಲಿ ಮೇದಾರ ಸಮಾಜದಿಂದ ಏರ್ಪಡಿಸಿದ ಕೇತೇಶ್ವರ ಸ್ವಾಮಿಯ 895ನೇ ಜಯಂತ್ಯುತ್ಸವದ ಭಾವಚಿತ್ರದ ಮೆರವಣಿಗೆಗೆ ಗಂಗಾ ಕೋ– ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ರತ್ನಾಕರ ಟಿ.ಕುಂದಾಪುರ ಚಾಲನೆ ನೀಡಿದರು
ರಾಣೆಬೆನ್ನೂರಿನಲ್ಲಿ ಮೇದಾರ ಸಮಾಜದಿಂದ ಏರ್ಪಡಿಸಿದ ಕೇತೇಶ್ವರ ಸ್ವಾಮಿಯ 895ನೇ ಜಯಂತ್ಯುತ್ಸವದ ಭಾವಚಿತ್ರದ ಮೆರವಣಿಗೆಗೆ ಗಂಗಾ ಕೋ– ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ರತ್ನಾಕರ ಟಿ.ಕುಂದಾಪುರ ಚಾಲನೆ ನೀಡಿದರು   

ರಾಣೆಬೆನ್ನೂರು: ಮೇದಾರ ಸಮುದಾಯವು ಕಾಯಕದೊಂದಿಗೆ ಸಮಾಜದ ಸಂಘಟನೆ ಮತ್ತು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಗರದ ಗಂಗಾ ಕೋ–ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ರತ್ನಾಕರ ಟಿ.ಕುಂದಾಪುರ ಹೇಳಿದರು.

ಇಲ್ಲಿನ ಹೆಸ್ಕಾಂ ಗಣೇಶ ದೇವಸ್ಥಾನದ ಆವರಣದಲ್ಲಿ ಬುಧವಾರ ಮೇದಾರ ಸಮಾಜದ ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ ಶರಣ ಕೇತೇಶ್ವರ ಸ್ವಾಮಿಯ 895ನೇ ವೈಭವದ ಜಯಂತ್ಯುತ್ಸವದ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜು ಅಡಿವೆಪ್ಪನವರ, ಸುರೇಶ್ ಜಡಮಲಿ, ಸಲೀಂ ಮೆಣಸಿನಕಾಯಿ, ಮೇದಾರ ಸಮಾಜದ ಉಪಾಧ್ಯಕ್ಷ ಮಂಜುನಾಥ ಅಯ್ಯಪ್ಪನವರ, ಗೌರವ ಅಧ್ಯಕ್ಷ ಹನುಮಂತಪ್ಪ ಶಿರಗುಂಪಿ, ಪ್ರಕಾಶ್ ಅಬ್ಬಿಗೇರಿ, ಕಾರ್ಯದರ್ಶಿ ನಾಗರಾಜ್ ಗುಡದಳ್ಳಿ, ಬಿ ಬಸಪ್ಪ, ಸದಸ್ಯರಾದ ಟಿ. ಮಲ್ಲೇಶ, ಕೊಟ್ರೇಶ ಹೊಳಲ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.